ದುಡಿಯುವ ಕೈಗೆ ಬಡತನವಿಲ್ಲ

ydg06
Published on

ಕೆಂಭಾವಿ: ಶ್ರಮ ವಹಿಸಿ ದುಡಿಯುವ ಕೈಗೆ ಬಡತವಿಲ್ಲ ಎಂದು ಕೋರಿಸಿz್ದೆÃಶ್ವರ ಶಾಖಾ ಮಠದ ಶ್ರೀ ಶಾಂತರುದ್ರಮುನಿ ಸ್ವಾಮೀಜಿ ನುಡಿದರು.
ಕರಡಕಲ್ ಕೋರಿಸಿz್ದÉÃಶ್ವರ ಶಾಖಾ ಮಠದಲ್ಲಿ ೩೬ನೇ ವರ್ಷದ ಮೌನಾನುಷ್ಠಾ ಮಹಾಮಂಗಲ ಸೇರಿ ವಿವಿಧ ಕರ‍್ಯಕ್ರಮಗಳ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಾನವನ ವ್ಯಕ್ತಿತ್ವ ವಿಕಸನಕ್ಕೆ ಧರ್ಮದ ಕೊಡುಗೆ ಅಪಾರವಾಗಿದೆ ಹೀಗಾಗಿ ಧಾರ್ಮಿಕ ಮೌಲ್ಯದಿಂದ ಕೂಡಿದ ಬದುಕು ಬಹಳ ಅರ್ಥಪೂರ್ಣವಾಗಿರುವುದಲ್ಲದೇ ಶ್ರಮ ವಹಿಸಿ ದುಡಿಯುವವರಿಗೆ ಬಡತನವಿಲ್ಲ ಎಂದರು.

ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆರೋಗ್ಯಪೂರ್ಣ ಆದರ್ಶಗಳೇ ದಾರಿದೀಪ. ಮನುಷ್ಯನ ಬುದ್ಧಿಶಕ್ತಿ ಅಸಾಧಾರಣವಾಗಿದೆ. ಮಾನವ ಪಕ್ಷಿಯಂತೆ ಹಾರಾಡಲು ಬಲ್ಲ. ಮೀನಿನಂತೆ ಈಜಾಡಬಲ್ಲ ಆದರೆ ಮನುಷ್ಯ ಮನುಷ್ಯನಾಗಿ ಈ ಭೂಮಿ ಮೇಲೆ ಬದುಕಿ ಬಾಳುವುದನ್ನು ಕಲಿಯಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದುಡಿಯುವ ಕೈಗೆ ಬಡತನವಿಲ್ಲ, ಆಲಸ್ಯದ ಬದುಕಿಗೆ ನೆಮ್ಮದಿಯಿಲ್ಲ. ಕರ್ತವ್ಯದ ಕಾಲು ದಾರಿಯಲ್ಲಿ ಹೆಜ್ಜೆ ಹೆಜ್ಜೆಗೂ ತೊಡಕುಗಳು ಬರಬಹುದು. ಅಜ್ಞಾನ ಅಧರ್ಮಗಳ ಅಂಧಕಾರದ ಬದುಕು ಧರ್ಮ ದೀಪದ ಬೆಳಕಿನಿಂದ ಮಾತ್ರ ಸಂತೋಷ ಪಡೆಯಬಲ್ಲ. ಮನುಷ್ಯನ ಕಷ್ಟ ನಷ್ಟಗಳಿಗೆ ಧರ್ಮದ ಅಭಾವವೇ ಮೂಲ ಕಾರಣ ಎಂದರು.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ, ಭಾರತಿ ಶರಣಬಸಪ್ಪ ದರ್ಶನಾಪುರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್, ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ್, ಸಿದ್ದನಗೌಡ ಹರಸಗುಂಡಗಿ, ವಿರೇಶ ದೇಸಾಯಿ, ಭೀಮಣ್ಣ ನಾರಾಯಣಪುರ, ಭೀಮಣ್ಣ ಮೇಸ್ತಿç, ವಿಶ್ವನಾಥರೆಡ್ಡಿ ನಾಡಗೌಡ, ಮಲ್ಲಿಕಾರ್ಜುನ ಯಡಹಳ್ಳಿ, ಡಾ.ಎಸ್.ಎಂ.ನAದಗಿರಿ, ಹಣಮಂತ್ರಾಯ ಬೊಮ್ಮಗುಡ್ಡ, ಸಿದ್ದು ಪರನಸಹಳ್ಳಿ, ಗೌರಿಶಂಕರ ಗೌಡಗೇರಿ ಸೇರಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಸವದತ್ತಿಯ ಶ್ರೀಧರ ಅಸಂಗಿಹಾಳ ವಿಶೇಷ ಉಪನ್ಯಾಸ ನೀಡಿದರು. ಮಠದ ವಕ್ತಾರ ಶಿವಪ್ರಕಾಶ ಸ್ವಾಮೀಜಿ ಸ್ವಾಗತಿಸಿದರು. ಮಲ್ಲಿಕಾರ್ಜುನಸ್ವಾಮಿ ಪರಸನಹಳ್ಳಿ ನಿರೂಪಣೆ ಮಾಡಿದರು. ಶರಣಕುಮಾರ ಯಾಳಗಿ ಹಾಗೂ ತೋಟೇಂದ್ರ ಕರಡಕಲ ಇವರಿಂದ ಸಂಗೀತ ಸೇವೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net