ದುಡಿಮೆಗೆ ತಕ್ಕ ವೇತನ ಸಿಗದೆ ತಾರತಮ್ಯ

28-,kkr1
Published on

ಕಿಕ್ಕೇರಿ: ಒಂದು ದೇಶದ ವ್ಯವಸ್ಥೆ ಕೂಲಿಕಾರರ ಶ್ರಮದ ಮೇಲಿದ್ದು ದುಡಿಮೆಗೆ ತಕ್ಕ ವೇತನ ಸಿಗದಿರುವುದು ತಾರತಮ್ಯ ನೀತಿಯಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸಂಚಾಲಕ ಜಿ.ಎಚ್.ಗಿರೀಶ್ ತಿಳಿಸಿದರು.

ಹೋಬಳಿಯ ಗಂಗೇನಹಳ್ಳಿ ಗ್ರಾಮದಲ್ಲಿ ಶನಿವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಏರ್ಪಡಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕಾರ್ಮಿಕರರ ಸಮಸ್ಯೆ ಸರ್ಕಾರಕ್ಕೆ ತಲುಪಿಸಲು ತಾಲೂಕಿನಲ್ಲಿ ಬೃಹತ್ ಸಮ್ಮೇಳನ ಏರ್ಪಡಿಸಲು ತೀರ್ಮಾನಿಸಲಾಗಿದೆ. ಹಳ್ಳಿಗಾಡಿನಲ್ಲಿ ಶ್ರಮಿಕ ವರ್ಗದವರಿಗೆ ನಿತ್ಯ ಕೂಲಿ ಸಿಗುತ್ತಿಲ್ಲ. ಸಿಕ್ಕರೂ ಕೂಲಿ ಅತ್ಯಲ್ಪವಾಗಿದೆ. ನರೇಗಾ ಯೋಜನೆಯಲ್ಲಿ ದುಡಿಯುವ ಕಾರ್ಮಿಕರಿಗೆ ಕೂಲಿ ವೇತನ ಹೆಚ್ಚಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಹೇಳಿದರು.

ಸಂಘದ ಸದಸ್ಯರು ಮ್ಯೂಜಿಕಲ್ ಚೇರ್, ಮಡಕೆ ಹೊಡೆಯುವುದು, ಲೆಮನ್ ಆ್ಯಂಡ್ ಸ್ಪೂನ್ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಸದಸ್ಯರಾದ ಶ್ರವಣನಹಳ್ಳಿ ಗೋಪಾಲ್, ಜಿ.ಮಂಜು, ದೇವರಾಜು, ಪವಿತ್ರಾ, ಶಾರದಾ, ಶಿವಕುಮಾರಿ, ಲಕ್ಕಮ್ಮ, ರಂಗಮ್ಮ, ಸಣ್ಣಮ್ಮ, ಜಯಮ್ಮ, ಸುಮಾ, ಆಶಾ, ಭಾಗ್ಯಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net