ದುಂಡಳ್ಳಿಯಲ್ಲಿ ಗ್ರಂಥಪಾಲಕರ ದಿನಾಚರಣೆ

Librarian day
ದುಂಡಳ್ಳಿ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆಯನ್ನು ಸತ್ಯವತಿ ಉದ್ಘಾಟಿಸಿದರು.ಎಸ್.ಪಿ.ದಿವ್ಯಾ ತಮ್ಮೇಗೌಡ, ಅಶ್ವಿನಿ, ಮೀನಾಕ್ಷಿ ಇತರರು ಇದ್ದರು.
Published on

ಶನಿವಾರಸಂತೆ : ಸಮಿಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಶನಿವಾರ ಗ್ರಂಥಪಾಲಕರ ದಿನವನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ದುಂಡಳ್ಳಿ ಗ್ರಾ.ಪಂ. ನೂತನ ಅಧ್ಯಕ್ಷೆ ಸತ್ಯವತಿ ಉದ್ಘಾಟಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ ಮಾತನಾಡಿ, ಪುಸ್ತಕಗಳನ್ನು ಓದುವ ಅಭ್ಯಾಸದಿಂದ ಜ್ಞಾನ ವೃದ್ಧಿಯಾಗಲಿದೆ. ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳು ಹಾಗೂ ಓದುಗರಿಗೆ ಅವಶ್ಯ ಇರುವ ಮತ್ತು ಮಾಹಿತಿ ಒಳಗೊಂಡಿರುವ ಪುಸ್ತಕ ಹಾಗೂ ಕೃತಿಗಳು ಲಭ್ಯ ಇರುತ್ತದೆ. ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಪಾಲಕರ ಸೇವೆ ಸಹ ಬಹುಮುಖ್ಯ. ಈ ಹಿನ್ನೆಲೆಯಲ್ಲಿ ಗ್ರಂಥಾಪಾಲಕರ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಅಂಚೆ ಇಲಾಖೆ ಅಧಿಕಾರಿ ತಮ್ಮೇಗೌಡ, ಅಂಗನವಾಡಿ ಕಾರ್ಯಕರ್ತೆ ಅಶ್ವಿನಿ, ಮೀನಾಕ್ಷಿ, ವಿಮಲಾಕ್ಷಿ, ಸ್ವ ಸಹಾಯ ಸಂಘದ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net