ದೀಪೋತ್ಸವದೊಂದಿಗೆ ರಾಮದೂತನ ಸ್ಮರಣೆ

Aajaneyaswamy - Megalahalli
Published on

ಚಿತ್ರದುರ್ಗ: ಮೇಗಳಹಳ್ಳಿ ಆಂಜನೇಯ ಸ್ವಾಮಿ ಕಡೇ ಕಾರ್ತಿಕೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ಜರುಗಿತು.

ಕಾರ್ತಿಕೋತ್ಸವದ ಅಂಗವಾಗಿ ವಿವಿಧ ವರ್ಣದ ಸೇವಂತಿ, ಗುಲಾಬಿ ಬಟನ್ಸ್, ಹೂವಿನ ಹಾರದಿಂದ ಸ್ವಾಮಿಯ ಮೂರ್ತಿಗೆ ವಿಶೇಷ ಪುಷ್ಪಾಲಂಕಾರ ಸೇವೆ ನೆರವೇರಿತು.

ದೇಗುಲ ಆವರಣದಲ್ಲಿ ಸಂಜೆ ನಡೆದ ದೀಪೋತ್ಸವದಲ್ಲಿ ಭಕ್ತರು ಸಾವಿರಾರು ದೀಪಗಳನ್ನು ಹಚ್ಚುವ ಮೂಲಕ ರಾಮದೂತನ ಸ್ಮರಣೆಯೊಂದಿಗೆ ಭಕ್ತಿ ಸಮರ್ಪಿಸಿದರು.

ನಂತರ ನೆರೆದಿದ್ದ ಭಕ್ತರು ಮಹಾಮಂಗಳಾರತಿ ಪಡೆದು, ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net