

ಬೇಲೂರು: ತಾಲೂಕಿನ ಮೊಗಸವರ ಗ್ರಾಮದಲ್ಲಿ ಶನಿವಾರ ಗ್ರಾಮಸ್ಥರೆಲ್ಲ ಒಂದೆಡೆ ಸೇರಿ ಲಕ್ಕೆ ಸೊಪ್ಪಿನೊಂದಿಗೆ ಜಮೀನಿನಲ್ಲಿ ಬೆಳೆದ ಬೆಳೆಗಳನ್ನೆಲ್ಲ ಸಂಗ್ರಹಿಸಿ ಭೂಮಿಪೂಜೆ ಸಲ್ಲಿಸುವ ಮೂಲಕ ದೀಪಾವಳಿ ಹಬ್ಬವನ್ನು ಸ್ವಾಗತಿಸಿದರು.
ದೀಪಾವಳಿ ಹಬ್ಬದ ಅಂಗವಾಗಿ ಗ್ರಾಮಸ್ಥರೆಲ್ಲ ಜಮೀನಿಗೆ ತೆರಳಿ ಜಮೀನಿನಲ್ಲಿ ಬೆಳೆದಿದ್ದ ಬೆಳೆ, ಹೂವು, ಲಕ್ಕೆ ಸೊಪ್ಪು ಸೇರಿದಂತೆ ಪೂಜಾ ಸಾಮಗ್ರಿಗಳೊಂದಿಗೆ ಭೂಮಿಪೂಜೆ ನೆರವೇರಿಸಿದರು. ಮನೆ, ಹೊಲ, ಗದ್ದೆ, ತೋಟ, ದೇವಸ್ಥಾನಗಳಿಗೆ ತೆರಳಿ ದೇವರಿಗೆ ಸಮಸ್ಕರಿಸಿ ಲಕ್ಕೆ ಮತ್ತು ಇತರೆ ಪುಷ್ಪಗಳನ್ನು ಸಲ್ಲಿಸಿ ದೀಪಾವಳಿ ಎಲ್ಲರಿಗೂ ಒಳಿತು ಮಾಡಲಿ. ಮಳೆ-ಬೆಳೆ ಸಮೃದ್ಧಿಯಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಚೇತನ್ ಕುಮಾರ್, ಯಶ್ವಂತ್, ಉಮೇಶ್, ದಿವಾಕರ್, ನೀಲಕಂಠ, ಮನೋಜ್, ಶಿವಕುಮಾರ್, ಮೋಹನ್, ಸತೀಶ್, ಹರೀಶ್, ಪ್ರಕಾಶ್, ಯೋಗೇಶ್, ಧರ್ಮಪ್ಪ, ಮಂಜುನಾಥ್ ಇದ್ದರು.