ದೀಪಾವಳಿ ವರೆಗೂ ದಸರಾ ದೀಪಾಲಂಕಾರ ವಿಸ್ತರಣೆಗೆ ಒತ್ತಾಯ

dasara lightings
Published on

ಮೈಸೂರು: ದಸರಾ ದೀಪಾಲಂಕಾರವನ್ನು ದೀಪಾವಳಿ ಹಬ್ಬದವರೆಗೂ ವಿಸ್ತರಣೆ ಮಾಡುವಂತೆ ಮೈಸೂರು ಹೋಟೆಲ್ ಮಾಲೀಕರ ಸಂಘ ಆಗ್ರಹಿಸಿದೆ.

ದೀಪಾಲಂಕಾರ ಅ.23ರ ವರೆಗೂ ಇರಲಿದೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರವಾಸಿಗರು, ಶಾಲಾ ಮಕ್ಕಳು, ಸಾರ್ವಜನಿಕರು ಇದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಬಂಧು-ಬಳಗವನ್ನು ಮೈಸೂರಿಗೆ ಕರೆಸಿ ದೀಪಾಲಂಕಾರವನ್ನು ತೋರಿಸುವ ಮೂಲಕ ಸ್ಥಳೀಯರು ಸಂತೋಷಪಟ್ಟಿದ್ದಾರೆ.

ಜತೆಗೆ, ದಸರಾ ಸಂದರ್ಭದಲ್ಲಿ ಆಗಮಿಸಲು ಬರಲಾಗದ, ನೋಡಲಾಗದ ಪ್ರವಾಸಿಗರು ಇನ್ನೂ ಆಗಮಿಸುತ್ತಿದ್ದಾರೆ. ಈ ತಿಂಗಳು ಇನ್ನೂ 3 ಸರ್ಕಾರಿ ರಜೆಗಳು ಇರುವುದರಿಂದ ಹಾಗೂ ದೀಪಾವಳಿ ಹಬ್ಬ ಸಮೀಪಿಸುತ್ತಿರುವುದರಿಂದ ದೀಪಾಲಂಕಾರವನ್ನು ನ.3ರ ವರೆಗೂ ವಿಸ್ತರಣೆ ಮಾಡಬೇಕು ಎಂದು ಸಂಘದ ಅಧ್ಯಕ್ಷ ಸಿ.ನಾರಾಯಣ್‌ಗೌಡ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net