

ಹುಬ್ಬಳ್ಳಿ: ಶ್ರೀ ಕಾಮಾಕ್ಷಿ ಮಹಿಳಾ ಮಂಡಳದ 25ನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಭಾನುವಾರ ‘ಶ್ರೀಮತಿ ಕಾಮಾಕ್ಷಿ’ ಸ್ಪರ್ಧೆ ನಡೆಯಿತು.
ದೀಪಾ ಗುಡಿಸಾಗರ ಶ್ರೀಮತಿ ಕಾಮಾಕ್ಷಿ (ಪ್ರಥಮ), ಗೀತಾ ಕಲಬುರ್ಗಿ ಹಾಗೂ ಲೀಲಾವತಿ ಕುಂಬಾರ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಪಾರ್ವತಿ ಮಠದ ಬೆಸ್ಟ್ ಸ್ಮೈಲ್, ಪ್ರಣೀತಾ ಬುರುಡೆ ಬೆಸ್ಟ್ ಡ್ರೆಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ವಿಜಯಲಕ್ಷ್ಮೀ ವೀರೇಂದ್ರ, ಲಾವಣ್ಯ ಕೋರಿ ತೀರ್ಪಗಾರರಾಗಿ ಆಗಮಿಸಿದ್ದರು.
ಮಂಡಳದ ಅಧ್ಯಕ್ಷೆ ಅಪರ್ಣಾ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು. ನಂತರ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
ಜ್ಯೋತಿ ಪ್ರಲ್ಹಾದ ಜೋಶಿ, ಲೀನಾ ಮಿಸ್ಕಿನ್, ಶ್ರಾವಣಿ ಪವಾರ್, ಸಂಗೀತಾ ಜೋಶಿ, ವಿದ್ಯಾ ವಂಟಮೂರಿ, ಇತರರು ಉಪಸ್ಥಿತರಿದ್ದರು.