

ಚಿಕ್ಕಮಗಳೂರು: ದೀಪ ಪ್ರಗತಿಯ ಸಂಕೇತ. ಹಣತೆ ಯಾವುದೇ ಇರಲಿ ಬೆಳಕನ್ನೆ ನೀಡುತ್ತದೆ. ಕುಟುಂಬದ ಕತ್ತಲನ್ನು ಹೋಗಲಾಡಿಸುವಲ್ಲಿ ತಾಯಿಯ ಪಾತ್ರ ಮಹತ್ವದ್ದು ಎಂದು ಇತಿಹಾಸ ಉಪನ್ಯಾಸಕಿ ಲಾವಣ್ಯಕಿರಣ್ ಅಭಿಪ್ರಾಯಪಟ್ಟರು.
ಅಕ್ಕಮಹಾದೇವಿ ಮಹಿಳಾ ಸಂಘದ ಬಸವನಹಳ್ಳಿ ಬಡಾವಣೆಯ ಶರಣೆ ಗಂಗಾAಬಿಕ ತಂಡ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಗೌರಿ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗೌರಿಹುಣ್ಣಿಮೆ ಕಿರು ಕಾರ್ತಿಕ ದೀಪಾವಳಿ. ಎಣ್ಣೆ, ಬತ್ತಿ ಯಾವುದೇ ಇರಲಿ ದೀಪ ಬೆಳಗಿಸಿದರೆ ಮಾತ್ರ ಬೆಳಗುತ್ತದೆ. ಬೆಳಕು ಕಲ್ಯಾಣದ ಸಂಕೇತ. ಭೂಮಿಯ ಉಗಮ ಸಿದ್ಧಾಂತದಲ್ಲಿ ಮಹಾಸ್ಫೋಟ ಒಂದು. ಪುರಾಣ ಕಥೆಗಳಲ್ಲೂ ಸುರಾಸುರರ ಯುದ್ಧವಾದಾಗ ಬ್ರಹ್ಮ, ವಿಷ್ಣು, ಮಹೇಶ್ವರ ಉಗಮಕ್ಕೆ ರಾಜರಾಜೇಶ್ವರಿ ಕಾರಣರಾಗಿರುತ್ತಾಳೆ. ಜಗದ್ ಕಂಠಕರಾದ ಶಂಭು-ನಿಶAಭು-ಮಹಿಷಾಸುರ ಮತ್ತಿತರರ ಸಂಹಾರಕ್ಕೂ ದೇವತೆ ಬರಬೇಕಾಯಿತು ಎಂದು ಹೇಳಿದರು.
ಜಗತ್ತಿನ ರಕ್ಷಣೆಗೆ ಸ್ತಿçÃಶಕ್ತಿ ಅತ್ಯಗತ್ಯ. ಶಿವನಷ್ಟೇ ಪ್ರಾಮುಖ್ಯತೆ ಶಕ್ತಿಗೂ ಇದೆ. ವೇದಕಾಲದಲ್ಲೂ ಮಹಿಳೆಗೆ ಮಾನ್ಯತೆ ಇತ್ತು. ಗಾರ್ಗಿ, ಮೈತ್ರೇಯಿ, ಲೋಕಮುದ್ರಾ ಮತ್ತಿತರ ಮಹಿಳಾ ವಿದ್ವಾಂಸರು ಪುರುಷಪ್ರಧಾನ ಸಮಾಜದಲ್ಲೂ ಇದ್ದರು ಎಂದರು.
ಮಹಿಳೆರಿಗೆ ಸ್ವಾತಂತ್ರö್ಯ ಇದೆ. ಆದರೆ ಸ್ವೇಚ್ಛಾಚಾರಕ್ಕೆ ಅವಕಾಶವಿಲ್ಲ. ಸಮಾಜದ ಕಟ್ಟುಪಾಡಿಗೆ ಹೊಂದಿಕೊAಡು ಕುಟುಂಬ ಮತ್ತು ಸಮಾಜವನ್ನು ಮುನ್ನಡೆಸುವ ಶಕ್ತಿ ಮಹಿಳೆಗೆ ಇದೆ. ಯಾವುದೇ ಕ್ಷೇತ್ರದಲ್ಲಿ ಮಹಿಳೆ ಸಮರ್ಥವಾಗಿ ನಿರ್ವಸುತ್ತಾಳೆ. ಕುಟುಂಬದ ಒಳಿತಿಗಾಗಿ ಶ್ರಮಿಸುವ ಮಹಿಳೆ ಸ್ವ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಿತ್ಯ ಸಮಸ್ಯೆ, ಸವಾಲು ಎದುರಿಸುವ ಮಹಿಳೆಯರು ಯೋಗಾಭ್ಯಾಸ ಮಾಡುವುದು ಒಳಿತು ಎಂದು ಹೇಳಿದರು.
ಸಂಘದ ಅಧ್ಯಕ್ಷತೆಯನ್ನು ಯಮುನಾಸಿ ಶೆಟ್ಟಿ ವಹಿಸಿ ಮಾತನಾಡಿ, ಪ್ರತಿ ಹುಣ್ಣಿಮೆ ಕಾರ್ಯಕ್ರಮಗಳನ್ನು ಆಯಾ ಗುಂಪಿನ ಮುಖಂಡೆಯರು ಉತ್ತಮವಾಗಿ ನಿರ್ವಹಿಸಿದೆ. ಮುಂದಿನ ದಿನಗಳಲ್ಲಿ ಸಂಘದ ಚುನಾವಣೆ ನಡೆಯಲಿದೆ. ಉತ್ತಮ ಅಭ್ಯರ್ಥಿಗಳ ಆಯ್ಕೆ, ಸಹಕಾರ ಅಗತ್ಯ. ಸಂಘದ ಒಳಿತು, ಸೇವೆ ಇಲ್ಲಿ ಮುಖ್ಯವಾಗಿರುತ್ತದೆ. ಸಂಘವನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದರು.
ಕಾರ್ಯದರ್ಶಿ ರೇಖಾಉಮಾಶಂಕರ್, ಖಜಾಂಚಿ ಭಾರತಿ ಶಿವರುದ್ರಪ್ಪ, ಸಹಕಾರ್ಯದರ್ಶಿ ನಾಗಮಣಿಕುಮಾರ್, ಪ್ರಮೀಳಾ, ನಿರ್ದೇಶಕರಾದ ಹೇಮಲತಾ, ಗೀತಾ, ವಕೀಲೆ ಮಮತಾ ಮತ್ತಿತರರಿದ್ದರು.