ದೀನ್ದಯಾಳರ ಆದರ್ಶ ಅಳವಡಿಸಿಕೊಳ್ಳಿ

2809 KML-1
Published on

ಕಮಲಾಪುರ: ಪಂಡಿತ್ ದೀನ್ದಯಾಳ ಉಪಾಧ್ಯಾಯ ಅವರು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ವಿರೋಧಿಸಿದ ಮೊದಲ ವೀರ. ದೇಶ ಸೇವೆಗೆ ಇಡೀ ಜೀವನವನ್ನೇ ಮುಡಿಪಾಗಿಟ್ಟ ಉಪಾಧ್ಯಾಯರ ದೇಶಭಕ್ತಿ ಹಾಗೂ ಸಾಮಾಜಿಕ ಕಳಕಳಿ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಂಡಿತ್ ದೀನ್ದಯಾಳ ಉಪಾಧ್ಯಾಯರ ಜನ್ಮದಿನ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಇಡೀ ದೇಶಾದ್ಯಂತ ಸಂಚರಿಸಿ ಸಂಘಟಿಸಿದ ಫಲವಾಗಿಯೇ ಇಂದು ಜನಸಂಘ ಹಾಗೂ ಬಿಜೆಪಿ ಭಾರತದಲ್ಲಿ ಬಲಿಷ್ಠವಾಗಿ ಬೇರೂರಿದೆ ಎಂದರು.
ಬಿಜೆಪಿ ಮುಖಂಡ ಲಿಂಗರಾಜ ಬಿರಾದಾರ ಮಾತನಾಡಿದರು. ಇತ್ತೀಚೆಗೆ ಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಶ್ರೀಚಂದ ಗ್ರಾಮದ ರೈತ ಪೀರಶೆಟ್ಟಿ ಬೋಧನವಾಡಿ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ಧನ ಚೆಕ್ ವಿತರಿಸಲಾಯಿತು. ನಂತರ ಲಿಂಗನವಾಡಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಮತ್ತಿಮೂಡ, ಮನೆ ಕುಸಿದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಜನರ ಆರೋಗ್ಯ ವಿಚಾರಿಸಿದರು.
ಪ್ರಮುಖರಾದ ಸಂಗಮೇಶ ವಾಲಿ, ಸಿದ್ದಣಗೌಡ ಪಾಟೀಲ್, ಜಗನ್ನಾಥ ಮಾಲಿಪಾಟೀಲ್, ಹರ್ಷವರ್ಧನ ಗುಗ್ಗಳೆ, ಗೋರಕನಾಥ ಶಾಖಾಪುರ,ಸಿದ್ರಾಮಪ್ಪ ಮಾಲಿಬಿರಾದಾರ, ಸತೀಶ ಸೊರಡೆ, ಶಶಿಧರ ಮಾಕಾ, ವಿರೇಶ ಬಿರಾದಾರ, ರಾಜಕುಮಾರ, ಶರಣಗೌಡ ಪಾಟೀಲ್, ಸಾಗರ ಗುತ್ತೇದಾರ್, ಲಕ್ಷ್ಮೀಕಾಂತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net