

ಕಲಬುರಗಿ: ಚಿತ್ರದುರ್ಗದಲ್ಲಿ ಭೋವಿ ಗುರುಪೀಠದ ಇಮ್ಮಡಿ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ದೀಕ್ಷಾ ರಜತ ಮಹೋತ್ಸವ ಜು.೨೦ರಂದು ಹಮ್ಮಿಕೊಳ್ಳಲಾಗಿದೆ ಎಂದು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಎಸ್. ತಿಳಿಸಿದರು. ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಪೂಜ್ಯರ ಜನ್ಮದಿನೋತ್ಸವವನ್ನು ರಾಷ್ಟಿçÃಯ ಭೋವಿ ಜನೋತ್ಸವವಾಗಿ ನಡೆಸುತ್ತ ಬಂದಿದ್ದು, ಪ್ರಸ್ತುತ ದೀಕ್ಷಾ ರಜತ ಮಹೋತ್ಸವ ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ೨೦ರಂದು ಬೆಳಗ್ಗೆ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು, ಕನಕ ಗುರುಪೀಠದ ಜಗದ್ಗುರುಗಳು ಸೇರಿ ವಿವಿಧ ಪೂಜ್ಯರ ಸಾನ್ನಿಧ್ಯದ ಧರ್ಮ ಸಂಸತ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೃತಿ ಬಿಡುಗಡೆ ಮಾಡುವರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಅರವಿಂದ ಲಿಂಬಾವಳಿ ಇತರರು ಭಾಗವಹಿಸಲಿದ್ದಾರೆ ಎಂದರು. ರಾಮಯ್ಯ ಪೂಜಾರಿ, ರಾಜು ಗುತ್ತೇದಾರ್, ಸಿದ್ರಾಮ ದಂಡೂರಕರ್, ರಾಜು ದಾಬಿಮನಿ, ರಾಹುಲ್, ಮಲ್ಲಿಕಾರ್ಜುನ ಇತರರಿದ್ದರು.