ದಿವ್ಯ ಪರಂಪರೆಯ ಗುರುಗಳಿಗೆ ವಂದನೆ

WhatsApp Image 2025-07-10 at 7.24.39 PM
Published on

ಕಲಬುರಗಿ: ನಗರದ ಕೋಟನೂರ (ಡಿ)ಯಲ್ಲಿರುವ ಸಿದ್ದಶ್ರೀ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಜಿಡಗಾ ಮುಗಳಕೋಡದ ದಿವ್ಯ ಪರಂಪರೆಯ ಗುರುಗಳ ಛದ್ಮವೇಷವನ್ನು ಮಕ್ಕಳಿಗೆ ಧಾರಣೆ ಮಾಡಿಸಿ, ಎಲ್ಲ ಗುರುವೃಂದಕ್ಕೆ ನಮನಗಳನ್ನು ಸಲ್ಲಿಸಿ, ಗುರುಪರ‍್ಣಿಮೆಯನ್ನು ವಿಭಿನ್ನವಾಗಿ ಆಚರಿಸಲಾಯಿತು.

ಪರಂಪರೆಯ ಗುರುಗಳಾದ ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾರಾಜರು, ಮುಗಳಖೋಡದ ಶ್ರೀ ಯಲ್ಲಾಲಿಂಗ ಮಹಾರಾಜರು, ಜಿಡಗಾದ ಶ್ರೀ ಸಿದ್ಧರಾಮ ಶಿವಯೋಗಿಗಳು, ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಡಾ.ಮುರುರಾಜೇಂದ್ರ ಮಹಾಸ್ವಾಮೀಜಿಗಳ ಛದ್ಮವೇಷ ಧರಿಸಿದ ಮಕ್ಕಳು ಗಮನ ಸೆಳೆದರು.

ಶಿಕ್ಷಕಿ ಅನಿತಾ ಹಿರೇಮಠ ಮಾತನಾಡಿ, ಜೀವನದಲ್ಲಿ ಬದಲಾವಣೆಗೆ ಸನ್ಮರ‍್ಗ ತೋರುವ ಹೆತ್ತವರು, ಗುರು, ಹಿರಿಯರಿಗೆ ಪೂಜ್ಯ ಭಾವದಿಂದ ಕಾಣಬೇಕು ಎಂದರು. ಸಂಸ್ಥೆ ಉಪಾಧ್ಯಕ್ಷ ಬಸವರಾಜ ಹಿರೇಮಠ ಇತರರು ಇದ್ದರು. ಶಿಕ್ಷಕಿ ರೋಹಿಣಿ ಸ್ವಾಗತಿಸಿದರು. ಸುಹಾಸಿನಿ ವಂದಿಸಿದರು. ಸೌಭಾಗ್ಯ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net