ದಿಟ್ಟತನದಿಂದ ದುಡಿದ ಶಿಕ್ಷಕಿ

3Aigali1
Published on

ಐಗಳಿ: ಮಹಿಳೆಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತೆ ಎಂದು ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದ ಮಾತೆ ಸಾವಿತ್ರಿಬಾಯಿ ಫುಲೆ ಎಂದು ಮುಖಂಡ ಸಿ.ಎಸ್.ನೇಮಗೌಡ ಹೇಳಿದರು.

ಇಲ್ಲಿನ ಫುಲೆ ಸರ್ಕಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಪ್ರಥಮ ಶಿಕ್ಷಕಿಯಾಗಿ, ಸಮಾಜ ಸೇವಕಿಯಾಗಿ ದಿಟ್ಟತನದಿಂದ ಸಾವಿತ್ರಿಬಾಯಿ ದುಡಿದಿದ್ದಾರೆ ಎಂದರು. ಅಪ್ಪು ಮಾಳಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಶಕುಂತಲಾ ಪಾಟೀಲ, ಸದಸ್ಯರಾದ ಸಾವಿತ್ರಿ ಮಾಳಿ, ಸುರೇಶ ಬಿಜ್ಜರಗಿ, ಹಿರಿಯರಾದ ಅಣ್ಣಾಸಾಹೇಬ ಹಾಲಳ್ಳಿ, ಅಣ್ಣಾಸಾಹೇಬ ಪಾಟೀಲ, ಧರೆಪ್ಪ ಮಾಳಿ, ಎ.ಎಸ್.ತೆಲಸಂಗ, ಅಪ್ಪು ಸವಕಾರ, ಭೀಮಣ್ಣ ಮಾಳಿ, ಬಾಳು ಕನಮಡಿ, ಬಸು ಮಾಳಿ, ಶಿವನಿಂಗ ಅರಟಾಳ, ಶಿವಾನಂದ ಸಿಂಧೂರ, ಅಪ್ಪಾಸಾಹೇಬ ಮದಬಾವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net