

ಕಲಬುರಗಿ: ಸಮಾಜದಲ್ಲಿ ಬೇರು ಬಿಟ್ಟಿದ್ದ ಜಾತಿ ಪದ್ದತಿ, ಮೂಡನಂಬಿಕೆ, ಅಂಧಶ್ರದ್ಧೆ ಹೊಗಲಾಡಿಸಿ ಸಮಾನವಾಗಿ ಬಾಳಬೇಕು ಎಂದು ಸಾರಿದ ದಿಟ್ಟ ವಚನಕಾರ ಮಡಿವಾಳ ಮಾಚಿದೇವರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ನಗರದ ಡಾ.ಎಸ್.ಎಂ.ಪAಡಿತ್ ರಂಗಮAದಿರದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಕ್ರಾಂತಿ, ಶರಣರ ವಚನಗಳು ನಮಗೆ ದಾರಿ ದೀಪವಾಗಿವೆ. ಶರಣ ಮಾಚಿದೇವರು ಕಾಲಜ್ಞಾನಿ ಎಂದು ಪ್ರಸಿದ್ಧಿ ಪಡೆದಿದ್ದರು. ಪರಿಶುದ್ಧ ಕಾಯಕಕ್ಕೆ ಹೆಸರಾಗಿದ್ದರು ಎಂದರು.
ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪ್ರೊ.ದಯಾನಂದ ಅಗಸರ ಮಾತನಾಡಿ, ರಿಂಗ್ ವೃತ್ತಕ್ಕೆ ಮಡಿವಾಳ ಮಾಚಿದೇವ ನಾಮಕರಣ, ಶಾಸಕರ ಅನುದಾನದಲ್ಲಿ ಒಂದು ೧ ಕಿ.ಮಿ. ರಸ್ತೆ ನಿರ್ಮಾಣ ಭರವಸೆಗಳು ಸಮಾಜಕ್ಕೆ ಶಕ್ತಿ ತುಂಬಲಿವೆ. ಮಾಚಿದೇವರ ಆದರ್ಶದಲ್ಲಿ ಸಾಗಬೇಕು ಎಂದರು.
ಹಿAದಿ ಪ್ರಚಾರ ಸಭೆ ಕಾರ್ಯದರ್ಶಿ ಅಶೋಕ ಗುರೂಜಿ ಮಾತನಾಡಿ, ಬಟ್ಟೆ ಜತೆಗೆ ಮನಸ್ಸು ಶುದ್ಧ ಮಾಡಬೇಕು ಎಂಬ ಸಂದೇಶ ಸಾರಿದ್ದ ಮಾಚಿದೇವರು. ಕಲ್ಯಾಣ ಕ್ರಾಂತಿ ವೇಳೆ ಬಸವೇಶ್ವರರು ಮಡಿವಾಳ ಮಾಚಿದೇವ ನನ್ನ ತಂದೆ ಎಂದಿದ್ದಾರೆ. ಅಂತಹ ಮಹಾನ್ ಶರಣ ಜಯಂತಿಯೂ ಸಾರ್ವಕಾಲಿಕ ಸ್ಫೂರ್ತಿ ನೀಡುತ್ತದೆ ಎಂದರು.
ಜಿಲ್ಲಾಧಿಕಾರಿ ಕಚೇರಿ ಸಾಮಾಜಿಕ ಭದ್ರತಾ ಹಾಗೂ ಪಿಂಚಣಿ ಯೋಜನೆ ಸಹಾಯಕ ನಿರ್ದೇಶಕ ಶಿವಶರಣಪ್ಪ ದಿನ್ನಿ ಮಾತನಾಡಿದರು. ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಕಚೇರಿ ಚುನಾವಣೆ ತಹಸೀಲ್ದಾರ್ ಪಂಪಯ್ಯ ಮಡಿವಾಳ, ದತ್ತಪ್ಪ ಸಾಗನೂರ, ಸಮಾಜ ಜಿಲ್ಲಾಧ್ಯಕ್ಷ ಮಲ್ಲಣ್ಣ ಮಡಿವಾಳ ಶಹಾಪುರಕರ್, ಚಂದ್ರಶೇಖರ ಮಡಿವಾಳ, ಗುರುನಾಥ ಎಸ್.ಯಾದಗಿರಿ, ಶರಣಪ್ಪ ಮಡಿವಾಳ ಇತರರಿದ್ದರು.