ದಿಗ್ಗಿ ಸಂಗಮೇಶ್ವರ ಮಹಾರಾಜಕಿ ಜೈ

ydg06
Published on

ಶಹಾಪುರ: ನಗರದ ಭೀಮರಾಯನಗುಡಿ ಬಳಿ ಇರುವ ದಿಗ್ಗಿ ಸಂಗಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಸಂಜೆ ಸಾವಿರಾರು ಸಂಖ್ಯೆಯ ಭಕ್ತರ ನಡುವೆ ಅದ್ದೂರಿ ರಥೋತ್ಸವ ನಡೆಯಿತು.

ಶ್ರಾವಣ ಮಾಸದ ನಾಲ್ಕನೇ ಸೋಮವಾರ ಬೆಳಗ್ಗೆಯಿಂದಲೇ ಭಕ್ತರ ದಂಡು ದಿಗ್ಗಿ ಸಂಗಮೇಶ್ವರ ದೇವಸ್ಥಾನಕ್ಕೆ ಆಗಮಿಸಿ ಕಾಯಿ, ಕರ್ಪೂರ ಸಲ್ಲಿಸಿ, ನೈವೇದ್ಯ ಅರ್ಪಿಸಿ ಗವಿಯಲ್ಲಿರುವ ಸಂಗಮನಾಥನ ದರ್ಶನ ಪಡೆದು ಪುನಿತರಾದರು.

ಮಂಗಳವಾರ ಎಂದಿನAತೆ ಸಂಗಮೇಶ್ವರ ಮೂರ್ತಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ನೆರವೇರಿದವು. ದಿಗ್ಗಿ ಗುಡ್ಡದ ಮೇಲಿರುವ ದೇವಸ್ಥಾನಕ್ಕೆ ಭಕ್ತರು ಸಾಲುಗಟ್ಟಿ ಏರುವ ಮೂಲಕ ಮೂರ್ತಿ ಮತ್ತು ಪಲ್ಲಕ್ಕಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯ ನಡೆದವು.

ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಜಮಾಗೊಂಡು ಸಂಜೆಯವರೆಗೆ ನಿರಂತರವಾಗಿ ದೇವರ ದರ್ಶನ ಪಡೆದರೆ, ಇನ್ನೂ ಕೆಲ ಭಕ್ತರು ತಮ್ಮ ಹರಕೆ ತೀರಿಸಿದರು. ಸಂಜೆ ಅರ್ಚಕ ದೇವಯ್ಯ ಪೂಜಾರಿ ಸಂಪ್ರದಾಯ ಉಡುಪಿನಲ್ಲಿ ಆಗಮಿಸಿ ಸಂಜೆ ೬-೩೦ಕ್ಕೆ ಗುಡ್ಡದ ಕೆಳಗೆ ಸಿಂಗಾರಗೊAಡ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಶ್ರೀ ದಿಗ್ಗಿ ಸಂಗಮೇಶ್ವರ ಮಹಾರಾಜಕಿ ಜೈ ಎಂಬ ಘೋಷಗಳು ಮೊಳಗಿದವು. ದಿಗ್ಗಿ ಗ್ರಾಮ ಎರಡು ಕಡೆ ಇರುವ ಅಗಸಿ ದ್ವಾರದವರೆಗೂ ಭಕ್ತರ ದಂಡು ಜಮಾವಣೆಗೊಂಡು ಸಾಗಿದ ರಥೋತ್ಸವಕ್ಕೆ ಬಾಳೆಹಣ್ಣು, ಉತ್ತತ್ತಿ, ಖಾರಿಕ್ ಮತ್ತು ನಾರ್ ಎಸೆದು ಭಕ್ತಿ ಸಮರ್ಪಿಸಿದರು೮.

ಕಲಬುರಗಿ, ಯಾದಗಿರಿ, ಬಾಗಲಕೋಟ್, ವಿಜಯಪುರ ಸೇರಿ ನೆರೆಯ ಆಂಧ್ರ, ತೆಲಂಗಾಣ ರಾಜ್ಯದಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಸಂಗಮೇಶ್ವರ ದರ್ಶನ ಪಡೆದ ಪಡೆದರು. ಜಾತ್ರಾ ಮಹೋತ್ಸವ ನಿಮಿತ್ತ ಇಡೀ ದೇವಸ್ಥಾನ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಸ್ತೆಯುದ್ದಕ್ಕೂ ಭಕ್ತರ ದಂಡು ಬೀಡು ಬಿಟ್ಟಿತ್ತು. ಇಷ್ಟೇ ಇಲ್ಲದೆ ಸೂಕ್ತ ಬಿಗಿ ಬಂದೊಬಸ್ತ್ಗಾಗಿ ಪೊಲೀಸರು ವ್ಯವಸ್ಥೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net