ದಿ.ವಿನೋದ ಸವದಿ ಸೇವಾಕಾರ್ಯ ಸ್ಮರಣೀಯ

13Athni1
Published on

ಅಥಣಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಶಿವಾನಂದ ಭಾರತಿ ಪದವಿಪೂರ್ವ ಮಹಾವಿದ್ಯಾಲಯ ಸ್ಥಾಪಿಸಿರುವ ದಿ.ವಿನೋದ ಪರಪ್ಪ ಸವದಿಯವರ ಸೇವೆ ಸ್ಮರಣೀಯ ಎಂದು ಶಿವಾನಂದ ಭಾರತಿ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ಅಧ್ಯಕ್ಷ ಬಸವರಾಜ ತೇಲಿ ಹೇಳಿದರು.

ಪಟ್ಟಣದ ಸತ್ತಿ ರಸ್ತೆಯಲ್ಲಿರುವ ಶಿವಾನಂದ ಭಾರತಿ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ಸಂಸ್ಥಾಪಕ ದಿ.ವಿನೋದ ಸವದಿಯವರ ೪ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿ, ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಚೈತನ್ಯದ ಚಿಲುಮೆಯಾಗಿ ನಮಗೆಲ್ಲ ಮಾರ್ಗದರ್ಶಿಯಾಗಿದ್ದರು. ಕೋವಿಡ್ ಸಮಯದಲ್ಲಿ ಅಗಲಿದ ಅವರು ಇಂತಹ ಶಿಕ್ಷಣ ಸಂಸ್ಥೆ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತೆ ಪ್ರೇರಣೆ ನೀಡಿದ್ದಾರೆ ಎಂದರು.

ಪ್ರಾಚಾರ್ಯ ಎಸ್.ಜೆ.ಕಮತಗಿ ಮಾತನಾಡಿ, ಪ್ರತಿದಿನ ಕ್ರಿಯಾತ್ಮಕ ಚಿಂತನೆ, ಹೊಸ ಆಲೋಚನೆ ಹೊಂದಿದ್ದರು. ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ ಕಲಿಕೆಗೆ ಪ್ರೇರೇಪಿಸುತ್ತಿದ್ದರು. ಅವರ ಆಶಯದಂತೆ ಇಂದು ಕಲೆ, ವಾಣಿಜ್ಯ, ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ ಎಂದರು.

ಸಂಸ್ಥೆಯ ಉಪಾಧ್ಯಕ್ಷೆ ಕಸ್ತೂರಿ ಅವಟಿ, ಕಾರ್ಯದರ್ಶಿ ಪ್ರಕಾಶ ತೇಲಿ, ನಿರ್ದೇಶಕರಾದ ಶಿವಾನಂದ ಬಿರಾದಾರಪಾಟೀಲ, ಬಸವರಾಜ ಸಾವಡಕರ, ಅಪ್ಪಾಸಾಹೇಬ ಹೊನಕಾಂಬಳೆ, ರಾಜು ತೇಲಿ, ಉಪನ್ಯಾಸಕ ಎಸ್.ಆರ್.ಕಾರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net