

ಮಹಾರಾಜ ಕಾಲೇಜು-ಒಂದು ಚಾರಿತ್ರಿಕ ಬೆಳವಣಿಗೆ (1833-1956) ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸಿ ಮಾಹಿತಿಗಳನ್ನು ಗ್ರಂಥ ರೂಪದಲ್ಲಿ ಪ್ರಕಟಿಸಲು ಮೈಸೂರು ವಿಶ್ವವಿದ್ಯಾಲಯವು ದಿ ಮಿಥಿಕ್ ಸೊಸೈಟಿಯೊಡನೆ ಒಡಂಬಡಿಕೆಗೆ ಸಹಿ ಹಾಕಿದೆ.
ಡಾ.ರೋಹಿತ ಈಶ್ವರ, ಡಾ.ಪವಮಾನ ಹಾಗೂ ಡಾ.ಗ್ಯಾವಿನ್ ಜೂಡ್ ವಿಲ್ಸನ್ ಅವರು ಸಂಶೋಧನೆಯಲ್ಲಿ ತೊಡಗಿದ್ದಾರೆ. ಇವರೊಂದಿಗೆ ಇತಿಹಾಸಕಾರ ಡಾ.ನರೇಂದ್ರ ಪ್ರಸಾದ್ ಇರಲಿದ್ದಾರೆ. ಭಾರತದ ಪತ್ರಾಗಾರ ಹಾಗೂ ಇತರ ಗ್ರಂಥಾಲಯಗಳಲ್ಲಿ ಲಭ್ಯವಿರುವ ಎಲ್ಲ ದಾಖಲಿತ ಮಾಹಿತಿಯ ಸಂಗ್ರಹಣೆ ಮಾಡಿ ಗ್ರಂಥ ರಚಿಸಲಾಗುತ್ತದೆ. ಕುಲಪತಿ ಪ್ರೊ.ಲೋಕನಾಥ, ಕುಲಸಚಿವೆ ಎಂ.ಕೆ.ಸವಿತಾ ಸಮ್ಮುಖದಲ್ಲಿ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ಡಾ.ಎಸ್.ರವಿ ಮಿಥಿಕ್ ಸೊಸೈಟಿಯ ಪರವಾಗಿ ಒಡಂಬಡಿಕೆಗೆ ಸಹಿ ಹಾಕಿದರು.