

ಧಾರವಾಡ: ದಿ ಕೇವ್ ಸಿಎ, ಸಿಎಸ್ ಇನ್‌ಸ್ಟಿಟ್ಯೂಟ್‌ನ ನೂತನ ಶಾಖೆಯನ್ನು ಸೆ. 24ರಂದು ಸಂಗಮ ಟಾಕೀಜ್ ಬಳಿ ಆರಂಭಿಸಲಾಗುವುದು ಎಂದು ಸಿಎಸ್ ದಿಶಾ ದೇಶಪಾಂಡೆ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಸಂತೋಷ ಲಾಡ ಉದ್ಘಾಟಿಸುವರು. ಮಾಜಿ ಪಾಲಿಕೆ ಸದಸ್ಯ ದೀಪ ಚಿಂಚೋರೆ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಸ್ಥೆಯು 5 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಿಎ, ಸಿಎಸ್ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಅತ್ಯುತ್ತಮ ಶಿಕ್ಷಕರೊಂದಿಗೆ ಶಾಖೆ ಆರಂಭಿಸಲಾಗುತ್ತಿದೆ ಎಂದರು.
ಶುಭಂ ರೈ, ಇತರರು ಇದ್ದರು.