ದಾಸೋಹಕ್ಕೆ ದಿನಸಿ ಪದಾರ್ಥ ಕೊಡುಗೆ

16blrp2
Published on

ಬೇಲೂರು: ನಿಸ್ವಾರ್ಥ ಗೆಳೆಯರ ಬಳಗಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಳಗದಿಂದ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ವಿತರಿಸಲು ಅನುಕೂಲವಾಗಲೆಂದು ದೇವಸ್ಥಾನದ ದಾಸೋಹಕ್ಕೆ ತರಕಾರಿ, ಅಕ್ಕಿ, ದಿನಸಿ ಪದಾರ್ಥಗಳನ್ನು ಸೋಮವಾರ ನೀಡಲಾಯಿತು.

ನಿಸ್ವಾರ್ಥ ಗೆಳೆಯರ ಬಳಗದ ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ನಮ್ಮ ನಿಸ್ವಾರ್ಥ ಬಳಗದ ತಂಡ ಮೂರು ವರ್ಷಗಳಿಂದ ಪ್ರತಿ ತಿಂಗಳು ಜನರ ಸೇವೆ ಮಾಡುತ್ತಿದ್ದೇವೆ. ಅದರಲ್ಲೂ ದೇವಸ್ಥಾನಗಳ ಆವರಣ ಸ್ವಚ್ಛತಾ ಕಾರ್ಯ, ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ, ದಾಸೋಹ ವ್ಯವಸ್ಥೆ, ನಿರ್ಗತಿಕರಿಗೆ ಕೈಲಾದ ಸೇವೆ ಮಾಡುತ್ತಿದ್ದೇವೆ. ಪ್ರತಿ ವರ್ಷ ಬಳಗದ ಪ್ರಾರಂಭದ ದಿನದಂದು ಅನ್ನ ದಾಸೋಹ ಸೇವೆ ಮಾಡುತ್ತಿದ್ದೆವು. ಆದರೆ, ಈ ಬಾರಿ ಮಳೆ ಕಾರಣದಿಂದ ಚನ್ನಕೇಶವಸ್ವಾಮಿ ದೇಗುಲದ ಭಕ್ತರಿಗೆ ಪ್ರಸಾದದ ರೂಪದಲ್ಲಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಾಸೋಹಕ್ಕೆ ತರಕಾರಿ, ಅಕ್ಕಿ, ದಿನಸಿ ಪದಾರ್ಥಗಳನ್ನು ವಿತರಿಸುತ್ತಿದ್ದೇವೆ ಎಂದು ಹೇಳಿದರು.

ಇತ್ತೀಚೆಗೆ ನಮ್ಮ ಹೆಸರನ್ನು ಕೆಲವರು ದುರ್ಬಳಕೆ ಮಾಡುತ್ತಿದ್ದಾರೆ. ಆದ್ದರಿಂದ ನಾವು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿರಲಿಲ್ಲ. ಈಗ ಸಮಸ್ಯೆ ಬಗೆಹರಿದಿದ್ದು ಇದಕ್ಕೆ ಸಹಕರಿಸಿ ನಮಗೆ ನ್ಯಾಯ ದೊರಕಿಸಿಕೊಟ್ಟ ನಮ್ಮ ತಂಡದ ಸದಸ್ಯರು ಹಾಗೂ ಪ್ರೋತ್ಸಾಹ ನೀಡಿದವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಬಳಗದ ರಾಜೇಶ್, ಕಾರ್ತಿಕ್, ಸುದರ್ಶನ್, ದೀಪಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net