ದಾಸೋಹ ಶತಮಾನೋತ್ಸವ ನಾಳೆ

Dasoha
Published on

ದಾವಣಗೆರೆ: ಚಿಂದೋಡಿ ಮನೆತನದ ದಾಸೋಹ ಪರಂಪರೆಯೂ 100 ವರ್ಷ ಪೂರೈಸಿದ್ದು, ದಾವಣಗೆರೆಯ ಹಳೇಪೇಟೆಯಲ್ಲಿ ಆ. 29ರಂದು ಬೆಳಗ್ಗೆ 10.30ಕ್ಕೆ ದಾಸೋಹ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಆಂಧ್ರಪ್ರದೇಶದ ಉರುಗಾದ್ರಿ ಮಹಾಸಂಸ್ಥಾನ ಮಠದ ಕರಿಬಸವರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗುರುಲಿಂಗ ಜಂಗಮರು, ಹರಗುರು ಚರಮೂರ್ತಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

1924ರಲ್ಲಿ ಗಾಯನ ಗಂಧರ್ವ ಅಣ್ಣಿಗೇರಿ ಚಿಂದೋಡಿ ಶಾಂತವೀರಪ್ಪ, ಶಾಂತಮ್ಮ ಅವರು ಜಂಗಮ ದಾಸೋಹ ಸೇವೆ ಆರಂಭಿಸಿದ್ದು, ಶತಮಾನೋತ್ಸವ ಪೂರೈಸಿದೆ. ಹೀಗಾಗಿ ಆಚರಿಸುತ್ತಿದ್ದೇವೆ. ಚಿಂದೋಡಿ ಕುಟುಂಬಸ್ಥರು ಪರಂಪರೆ ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ಚಿಂದೋಡಿ ಎಸ್.ವೀರಣ್ಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net