

ಕೆಂಭಾವಿ: ವಿಶ್ವಗುರು ಬಸವಣ್ಣರ ಹೆಸರಲ್ಲಿ ದಾಸೋಹ ಮಾಡಿಸುವುದು ಸೌಭಾಗ್ಯವಾಗಿದೆ ಎಂದು ಮುದಗಲ್ ಮಹಾಂತೇಶ್ವರ ಮಠದ ಶ್ರೀ ಡಾ.ಮಹಂತ ಸ್ವಾಮೀಜಿ ನುಡಿದರು.
ಮುದನೂರ ಗ್ರಾಮದಲ್ಲಿ ಲಿಂ. ಬಸವರೆಡ್ಡಪ್ಪಗೌಡ ಮಾಲಿ ಪಾಟೀಲ್ ಅವರ 11ನೇ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡ ಬಸವ ಪುರಾಣ ಪ್ರವಚನದಲ್ಲಿ ನಡೆದ ಬಸವಣ್ಣನವರ ಜನ್ಮೋತ್ಸವ ಕರ‍್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಬಸವಣ್ಣನವರು ಪ್ರಪಂಚದ ಮೊಟ್ಟ ಮೊದಲ ಪ್ರಜಾಪ್ರಭುತ್ವ ಮಾದರಿಯ ಅನುಭವ ಮಂಟಪದೊAದಿಗೆ ಸಮಾಜದಲ್ಲಿ ಸಮಾನತೆ, ಸ್ವಾತಂತ್ರö್ಯ, ಬಂಧುತ್ವ, ಮಾನವೀಯತೆ ಎಂಬ ನಾಲ್ಕು ತತ್ವಗಳ ಮೇಲೆ ಇಡೀ ಮನುಕುಲ ಬೆಳಗಿದರು. ಬಸವ ಪುರಾಣ ಕೇಳುವುದು ಭಾಗ್ಯ, ಹೇಳುವುದು ಭಾಗ್ಯ. ಬಸವ ಪುರಾಣವನ್ನು ಹಚ್ಚುವುದು ಭಾಗ್ಯ ಬಸವಣ್ಣನವರ ಹೆಸರಿನಲ್ಲಿ ದಾಸೋಹ ಮಾಡುವುದು ಜೀವನದ ಸೌಭಾಗ್ಯವಾಗಿದೆ ಎಂದರು.
ತೊಟ್ಟಿಲು ಕಾರ್ಯಕ್ರಮ ಅತ್ಯಂತ ಸಂಭ್ರಮ ಸಡಗರದಿಂದ ಜರುಗಿತು. ಸಾವಿರಾರು ಜನ ಭಕ್ತರು ಹಾಗೂ ತಾಯಂದಿರ ಭಕ್ತಿ ಭಾವಕ್ಕೆ ಸಾಕ್ಷಿಯಾಯಿತು. ತೊಟ್ಟಿಲಲ್ಲಿ ಬಸವರೆಡ್ಡಪ್ಪ ಗೌಡರ ಮನೆತನದ ಶರಣ ಚನ್ನರಡ್ಡಿಗೌಡರ ಮೊಮ್ಮಗನಾದ ಬಸವರೆಡ್ಡಿ ಮಗುವನ್ನು ತೊಟ್ಟಿಲಲ್ಲಿ ಹಾಕಿ ಬಸವರಾಜ, ಬಸವೇಶ, ಎಂದು ನಾಮಕರಣ ಮಾಡಿ ತೊಟ್ಟಿಲು ಕಾರ್ಯಕ್ರಮ ನೆರವೇರಿಸಲಾಯಿತು.
ಗಾಯಕ ಶಂಕ್ರಯ್ಯಸ್ವಾಮಿ ಗುರುಮಠ, ಮೈಸೂರಿನ ವಿದ್ವಾನ್ ರವಿಕುಮಾರ, ಬಸವರಾಜ ಹೊನ್ನಿಗನೂರು ಅವರಿಂದ ಸಂಗೀತ ಸೇವೆ ನೆರವೇರಿತು. ಮುದನೂರಿನ ಹಿರಿಯ ತಾಯಂದಿರು ಜೋಗುಳದ ಪದ ಹಾಡಿದರು.ಪೂಜ್ಯರಿಗೆ ಚೆನ್ನಾರೆಡ್ಡಿ ಪಾಟೀಲ್ ಮುದನೂರ ಸತ್ಕರಿಸಿ ಆಶೀರ್ವಾದ ಪಡೆದರು.