ದಾಸೋಹ ಭವನಕ್ಕೆ ಕಾರ್ಯದರ್ಶಿ ಭೇಟಿ

01 HANUR 5
Published on

ಹನೂರು: ಮಲೆಮಹದೇಶ್ವರ ಬೆಟ್ಟದ ದಾಸೋಹ ಭವನಕ್ಕೆ ಶುಕ್ರವಾರ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಾರದ ಹಿಂದಷ್ಟೇ ಪ್ರಾಧಿಕಾರದ ಕಾರ್ಯದರ್ಶಿಯಾಗಿ ನೇಮಕಗೊಂಡ ಇವರು ಬೆಳಗ್ಗೆ ದಾಸೋಹ ಭವನಕ್ಕೆ ತೆರಳಿ ಭಕ್ತರ ಜತೆಗೂಡಿ ತರಕಾರಿ ಬಾತ್ ಸೇವಿಸಿ ಪ್ರಸಾದದ ಗುಣಮಟ್ಟ ಪರೀಕ್ಷಿಸಿದರು.

ಹೆಚ್ಚು ತರಕಾರಿ ಬಳಕೆ ಮಾಡುವುದರ ಮೂಲಕ ಭಕ್ತರಿಗೆ ರುಚಿ-ಶುಚಿಯಿಂದ ಕೂಡಿದ ಗುಣಮಟ್ಟದ ಆಹಾರ ನೀಡಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಭವನದ ಉಸ್ತುವಾರಿ ಶಾಸ್ತ್ರೀ ಅವರಿಗೆ ಸೂಚಿಸಿದ ಅವರು, ಅಡುಗೆ ತಯಾರಿಸುವ ಸ್ಥಳ, ನೆಲಹಾಸು ಹಾಗೂ ಟೇಬಲ್ ಅಳವಡಿಕೆ ಕಾಮಗಾರಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net