

ಹುಬ್ಬಳ್ಳಿ: ನಗರದ ಶಕ್ತಿಕಾಲನಿ ಶ್ರೀ ರಾಘವೇಂದ್ರಸ್ವಾಮಿಗಳ ಸಂಗೀತ ಸೇವಾ ಪ್ರತಿಷ್ಠಾನ ದ 5ನೇ ವಾರ್ಷಿಕೋತ್ಸವ ನಿಮಿತ್ತ ಜ. 12ರಂದು ಸಂಜೆ 6 ಗಂಟೆಗೆ ದಾಸವಾಣಿ ಕಾರ್ಯಕ್ರಮ ಆಯೋಜಿಸಲಾಗಿದೆ.
ರಾಷ್ಟ್ರೀಯ ದಾಸವಾಣಿ ಕಲಾವಿದ, ಬಾಗಲಕೋಟೆಯ ಅನಂತ ಕುಲಕರ್ಣಿ ದಾಸವಾಣಿ ಪ್ರಸ್ತುತ ಪಡಿಸುವರು. ಚಿದಂಬರ ಜೋಶಿ ಹಾಮೋನಿಯಂ, ಮನುಕುಮಾರ ಹಿರೇಮಠ ಮತ್ತು ರಾಘವೇಂದ್ರ ನಾಕೋಡ ತಬಲಾ ಸಾಥ್ ನೀಡಲಿದ್ದಾರೆ. ತಾಳ ವಾದ್ಯದಲ್ಲಿ ಮನೋಹರ ಜೋಶಿ ಮತ್ತು ಅಶ್ವಥ ಆಚಾರ್ ಕುಲಕರ್ಣಿ ಭಾಗವಹಿಸುವರು.
ಪಂಡಿತ ಬಾಲಚಂದ್ರ ನಾಕೋಡ ಅಧ್ಯಕ್ಷ ತೆ ವಹಿಸುವರು ಎಂದು ಮಠದ ಧರ್ಮದರ್ಶಿಗಳಾದ ಶ್ರೀನಿವಾಸ ಪಾಟೀಲ ಹಾಗೂ ಗೋವಿಂದಾಚಾರ್ಯ ಪಾಟೀಲ ತಿಳಿಸಿದ್ದಾರೆ.