ದಾಸ ಶ್ರೇಷ್ಠನಿಗೆ ಕೋಟಿ ನಮನ, ಸಚಿವ ಎಂಟಿಬಿ ನಾಗರಾಜ್ ಗುಣಗಾನ, ಹೊಸಕೋಟೆಯಲ್ಲಿ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ

4d4d3779-96e0-4b36-beb3-c61849a211fb
Published on

ಬೆಂಗಳೂರು ಗ್ರಾಮಾಂತರ: ದಾಸರಲ್ಲಿ ಶ್ರೇಷ್ಠರ ಸಾಲಿನಲ್ಲಿ ಭಕ್ತ ಕನಕದಾಸರು ಅಗ್ರಗಣ್ಯರು, ಅಂಥ ಮಹಾನ್ ಸಂತ ಶ್ರೇಷ್ಠನಿಗೆ ಎಲ್ಲರ ಪರವಾಗಿ ಕೋಟಿ ನಮನ ಸಲ್ಲಿಸುತ್ತೇನೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಹೊಸಕೋಟೆಯಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯಲ್ಲಿ ಮಾತನಾಡಿದರು. ದಾಸ ಪದಗಳನ್ನು ಹಾಡುವ ಮೂಲಕ ಮಾನವನ ಜೀವನದ ಸಾರವನ್ನು ಎಳೆಎಳೆಯಾಗಿ ಬಿಡಿಸಿಟ್ಟವರು. ‘ಕುಲ ಕುಲ ಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ’ ಎಂದು ಮಾರ್ಮಿಕವಾದ ಜೀವನ ಸಾರವನ್ನು ಸಾರಿದ್ದರು. ಅವರ ಸಾಹಿತ್ಯದ ಸಾರ ಸಮಾಜಕ್ಕೆ ದಾರಿದೀಪವಾಗಿದೆ, ಅವರ ತತ್ಪಾದರ್ಶಗಳು ಎಂದೆಂದಿಗೂ ಸಾರ್ವಕಾಲಿಕ. ಸಮಾಜದಲ್ಲಿ ಪರಿವರ್ತನೆಯ ಹರಿಕಾರರಾಗಿದ್ದ ಕನಕದಾಸರು ದಾಸಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ್ದರು ಎಂದು ಸಚಿವರು ಹೇಳಿದರು.

ದಾಸ ಪರಂಪರೆ ಶ್ರೀಮಂತಿಕೆ ಕೀರ್ತಿಯನ್ನು ಬೆಳಗಿಸಿದ ಮಹಾನ್ ದಾಸರಿರವರು ಎಂದು ಬಣ್ಣಿನಿಸಿದರು. ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರಾಗಿದ್ದ ಕನಕದಾಸರು ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರಾಗಿದ್ದರು. ಕಾಗಿನೆಲೆಯ ಆದಿಕೇಶವನ ಭಕ್ತರಾಗಿ ಜಾತಿಪದ್ಧತಿಯ ತಾರತಮ್ಯ ಅಲ್ಲಗಳೆದು ಅನಿಷ್ಠ ಪದ್ಧತಿ ವಿರುದ್ಧ ಧ್ವನಿಯೆತ್ತಿತ ಮಹಾಮಹೀಮ. ಕನ್ನಡ ನಾಡು ಕಂಡ ದಾಸ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ ಜ್ಞಾನಿ ಹಾಗೂ ಸಮಾಜ ಸುಧಾರಕರೆಂದರೆ ಅತಿಶಯೋಕ್ತಿಯಾಗಲಾರದು. ವಿಶ್ವ ಮಾನವ ಕಲ್ಪನೆ ಹೊಂದಿದ್ದ ಮಾನವೀಯ ಗುಣಗಳನ್ನು ಪ್ರತಿಪಾದಿಸಿ, ಸಮಾನತೆ ಸಾರಿದ ಮಹನೀಯರು ಎಂದು ಸ್ಮರಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net