ದಾವಿವಿ ಆವರಣದಲ್ಲಿ ಶಿಕ್ಷಕರ ಪ್ರತಿಭಟನೆ

vv.jpg
Published on

ದಾವಣಗೆರೆ: ವಿಶ್ವವಿದ್ಯಾನಿಲಯದ ಬೋಧಕ ಸಿಬ್ಬಂದಿಗೆ ನೀಡುತ್ತಿರುವ ಹೊಸ ಪಿಂಚಣಿ ನೀತಿ (ಎನ್‌ಪಿಎಸ್) ರದ್ದುಪಡಿಸಿ, ಹಳೆಯ ಪಿಂಚಣಿ ನೀತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ದಾವಣಗೆರೆ ವಿವಿಯ ಶಿಕ್ಷಕರ ಸಂಘ ಬುಧವಾರ, ಶಿವಗಂಗೋತ್ರಿ ಆವರಣದಲ್ಲಿ ಪ್ರತಿಭಟನೆ ನಡೆಸಿತು.

ವಿವಿ ಮುಖ್ಯದ್ವಾರದ ಮುಂಭಾಗ ಘೋಷಣೆ ಕೂಗಿದ ಪ್ರತಿಭಟನಾನಿರತ ಶಿಕ್ಷಕರು, ಈ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರೂ ಸರ್ಕಾರ ಸ್ಪಂದಿಸಿಲ್ಲ. ನಮ್ಮ ಬೇಡಿಕೆ ಈಡೇರಿಸಲು ನಿರಾಸಕ್ತಿ ವಹಿಸಿರುವುದು ಬೇಸರ ಮೂಡಿಸಿದೆ ಎಂದರು. ಪ್ರಸ್ತುತ ಎನ್‌ಪಿಎಸ್ ಕ್ರಮದಿಂದ ಶಿಕ್ಷಕರಿಗೆ ಸೇವಾ ಭದ್ರತೆ ಇಲ್ಲವಾಗಿದೆ. ಇವರನ್ನು ಅವಲಂಬಿಸಿರುವ ಕುಟುಂಬಕ್ಕೆ ರಕ್ಷಣೆ ಬೇಕಾಗಿದೆ. ಬದಲಾಗುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ ಎನ್‌ಪಿಎಸ್ ಸುರಕ್ಷಿತವಲ್ಲ. ಆದ್ದರಿಂದ ಸರ್ಕಾರ, ಶಿಕ್ಷಕರ ಹಿತಕ್ಕಾಗಿ ಹಳೆಯ ಪಿಂಚಣಿ ನೀತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಡಾ.ಎಚ್.ವಿಶ್ವನಾಥ, ಪ್ರಧಾನ ಕಾರ್ಯದರ್ಶಿ ಪ್ರೊ.ಗೋಪಿನಾಥ, ಪ್ರೊ. ರವಿಕುಮಾರ ಪಾಟೀಲ, ಡಾ.ಬಸನಗೌಡ ಬೆನಕನಹಳ್ಳಿ, ಡಾ.ತಿಪ್ಪೇಶ್, ಡಾ. ದಾನೇಶ, ಡಾ.ಶಿವಲಿಂಗಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net