

ಚಿಂಚೋಳಿ: ಕಲ್ಯಾಣಗಡ್ಡಿ ಓಣಿಯ ಮಹಾಂತೇಶ್ವರ ಮಠಕ್ಕೆ ಹೊಂದಿಕೊAಡಿರುವ ಶ್ರೀ ದಾವಲ್‌ಮಲಿಕ್ ಆತುರಖಾನ್ ದರ್ಗಾ ಜಾಗದ ಆಸ್ತಿ ಸಂಖ್ಯೆ 3/2/209 ವಕ್ಫ್ಗೆ ಸಂಬAಧಿಸಿಲ್ಲ. ಮಹಾಂತೇಶ್ವರ ಮಠದ ಒಂದು ಭಾಗವಾಗಿದ್ದು, ಸದರಿ ಆಸ್ತಿಗೆ ಸಂಬAಧಿಸಿದAತೆ ಸುಮಾರು 23 ಕಡೆ ವಕ್ಫ್ ಸ್ವತ್ತು ನಮೂದಿಸಲು ವಿರೋಧಿಸಿ ತಕರಾರು ಅರ್ಜಿಯನ್ನು ಮಠದ ಭಕ್ತರು ಪುರಸಭೆ ಮುಖ್ಯಾಧಿಕಾರಿಗೆ ಮಂಗಳವಾರ ಸಲ್ಲಿಸಿದರು.
ಬಿಜೆಪಿ ಯುವ ಮುಖಂಡ ಸಂತೋಷ ಗಡಂತಿ ಮಾತನಾಡಿ, ಅತಿ ಹಿಂದುಳಿದ ಕ್ಷೇತ್ರದಲ್ಲಿ ಹಿಂದು-ಮುಸ್ಲಿಮರು ಭಾವೈಕ್ಯದಿಂದ ಬಾಳುತ್ತಿರುವುದಕ್ಕೆ ಶ್ರೀ ಮಹಾಂತೇಶ್ವರ ಮಠವೇ ಸಾಕ್ಷಿಯಾಗಿದೆ. ಮಹಾಂತೇಶ್ವರ ಪೂಜ್ಯರ ಪರಮ ಶಿಷ್ಯರಾಗಿ ದಾವಲ್‌ಮಲಿಕ್ ಇದ್ದರು. ಗುರು-ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿಯಾಗಿ ದಾವಲ್‌ಮಲಿಕ್ ತನ್ನೊಂದಿಗೆ ಇರಬೇಕು ಎಂದು ಅವರ ಸಮಾಧಿ ಮಾಡಿ ಪೂಜಿಸಲಾಗುತ್ತಿದೆ. ಹೀಗಾಗಿ ಈ ಆಸ್ತಿ ವಕ್ಫ್ ಬೋರ್ಡ್ನದ್ದಲ್ಲ. ಇದು ಶ್ರೀಮಠದ ಒಂದು ಭಾಗ. ಆದ್ದರಿಂದ ಪುರಸಭೆ ಯಾವ ಕಾರಣಕ್ಕೂ ದರ್ಗಾ ಜಾಗವನ್ನು ವಕ್ಫ್ ಆಸ್ತಿ ಎಂದು ನಮೂದಿಸುವಂತಿಲ್ಲ. ಆದರೂ ಪಟ್ಟಣದ 23 ಕಡೆ ವಕ್ಫ್ ಮಂಡಳಿ ನೋಟಿಸ್ ಅಂಟಿಸಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ಪುರಸಭೆ ವಕ್ಫ್ಗೆ ಸಂಬAಧಿಸಿದ ಆಸ್ತಿ ಎಂದು ನಮೂದಿಸಿದರೆ ಉಗ್ರ ಸ್ವರೂಪದ ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೌತಮ ಪಾಟೀಲ್, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಶರಣಪ್ಪ ಪಾಟೀಲ್, ಪ್ರಮುಖರಾದ ಸಂಗಪ್ಪ ಪಾಲಾಮೂರ, ಶಾಂತವೀರ ಸುಂಕದ, ಶೇಖರ ಸುಂಕದ, ಸಚ್ಚಿದಾನಂದ ಸುಂಕದ, ಶ್ರೀಹರಿ ಕಾಟಾಪುರ, ಬಸವರಾಜ ಖಾನಾಪುರ, ಕರ್ಣಪ್ಪ ಶಿವಪುರಿ, ಸಂತೋಷ ಸುಂಕದ, ನಾಗರಾಜ ಮಲಕೂಡ, ರಾಜು ಪಟಪಳ್ಳಿ, ಕಿರಣ ಪಂಚಾಳ, ಹಣಮಂತ ಕೋರಿ, ವಸಂತ ಇಟಗಿ, ಸಂಕೇತ ಬಬಲಾದಿ, ಶಂಕರ ನಾರಾ, ಶ್ರೀದತ್ತು ಕಳಸ್ಕರ್, ನಾಗಶೆಟ್ಟಿ ಮೇಲಗೇರಿ, ಸಂತೋಷಕುಮಾರ ಸೀಳಿನ್, ರಮೇಶ ಮಕಾಶಿ, ರಮೇಶ ಉಡಗಿ, ಶಿವಾನಂದ ಪಾಲಾಮೂರ, ಸುಭಾಷ ನಾಯಿನೂರ, ಸೂರ್ಯಪ್ರಕಾಶ ಕಲಬಾವಿ, ಮಹ್ಮದ್ ಸಾದಿಕ್, ಮಹಾಂತೇಶ ಮಜ್ಜಗಿ, ನಿತೀಶ ರೆಡ್ಡಿ, ಸಾಯಿಕಿರಣ, ಸಂತೋಷ ಕಲಶೆಟ್ಟಿ, ವೀರೇಶ ಯಂಪಳ್ಳಿ ಇದ್ದರು.