ದಾವಣಗೆರೆಯಲ್ಲಿ ಸುಸೂತ್ರ  ಶಿಕ್ಷಕರ ಅರ್ಹತಾ ಪರೀಕ್ಷೆ

shutterstock_1066845767-1024x683.jpg
Published on

ದಾವಣಗೆರೆ: ನಗರದ 23 ಕೇಂದ್ರಗಳಲ್ಲಿ ಭಾನುವಾರ, ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಸುಸೂತ್ರವಾಗಿ ನಡೆಯಿತು.

ಸಾಮಾನ್ಯ ಜ್ಞಾನ ಕುರಿತಂತೆ ಬೆಳಗ್ಗೆ 17 ಕೇಂದ್ರಗಳಲ್ಲಿ ಅಧಿವೇಶನ ನಡೆಯಿತು. ನೋಂದಣಿಯಾಗಿದ್ದ 4879 ಅಭ್ಯರ್ಥಿಗಳ ಪೈಕಿ 4247 ಮಂದಿ ಹಾಜರಾದರು. 632 ಪರೀಕ್ಷಾರ್ಥಿಗಳು ಗೈರಾಗಿದ್ದರು.

ವಿಷಯವಾರು ಕುರಿತು ಮಧ್ಯಾಹ್ನ 23 ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಯಿತು. ನೋಂದಣಿಯಾಗಿದ್ದ 5277 ಅಭ್ಯರ್ಥಿಗಳಲ್ಲಿ 632 ಮಂದಿ ಗೈರಾದರು. 4645 ಮಂದಿ ಪರೀಕ್ಷೆ ಬರೆದರು.

ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಎಸ್ಪಿ ಅವರ ಮಾರ್ಗದರ್ಶನದಲ್ಲಿ ಪರೀಕ್ಷೆ ಸುಗಮವಾಗಿ ನಡೆಸಲಾಯಿತು. ಅಭ್ಯರ್ಥಿಗಳಿಗೆ ಆರೋಗ್ಯ ಸಮಸ್ಯೆಯಾದಲ್ಲಿ ಕೇಂದ್ರವಾರು ಪ್ರಾಥಮಿಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು ಎಂದು ಡಿಡಿಪಿಐ ಜಿ.ಕೊಟ್ರೇಶ್ ತಿಳಿಸಿದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net