ದಾವಣಗೆರೆಯಲ್ಲಿ ವನಮಹೋತ್ಸವ

dvg-mayor-aug-19.jpg
Published on

ದಾವಣಗೆರೆ: ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಅಂಗವಾಗಿ ನನ್ನ ಮಣ್ಣು, ನನ್ನ ದೇಶ ಅಭಿಯಾನದಡಿ ನಗರದ ಗುಂಡಿ ಮಹದೇವಪ್ಪ ವೃತ್ತ ಸಮೀಪದ ಉದ್ಯಾನದಲ್ಲಿ ಭಾರತೀಯ ತಳಿಯ ಸಸಿಗಳನ್ನು ನೆಡಲಾಯಿತು.

ಫಿಲಿಶಿಯಂ ಡೆಸಿಪೆನ್ಸಿ, ಬೆಂಜಮಿನ್ ಫೈಕಸ್, ಬಾಟಲ್ ಬ್ರಶ್, ಲೆಜೆಸ್ಟ್ರೋಮಿಯ ತಬುಬಿಯ ರೋಸಿಯ ಜಾತಿಯ 100 ಸಸಿಗಳನ್ನು ನೆಡುವ ಜತೆಗೆ ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಅಭಿವೃದ್ಧಿಪಡಿಸಲು ಕ್ರಮವಹಿಸಲಾಯಿತು. ಈ ಸಂದರ್ಭದಲ್ಲಿ ಮೇಯರ್ ವಿನಾಯಕ ಪೈಲ್ವಾನ್, ಆಯುಕ್ತೆ ರೇಣುಕಾ, ಪರಿಸರ ಇಂಜಿನಿಯರ್ ಜಗದೀಶ್, ಬಸವಣ್ಣ, ಅಜಯ್ ಪ್ರಕಾಶ್, ಪಾಲಿಕೆಯ ತೋಟಗಾರಿಕೆ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net