ದಾವಣಗೆರೆಯಲ್ಲಿ ರಾಜೀವ್ ಗಾಂಧಿ ಪುಣ್ಯಸ್ಮರಣೆ

BASAVRAJ.jpg
Published on

ದಾವಣಗೆರೆ: ದೇಶದಲ್ಲಿ ತಂತ್ರಜ್ಞಾನದ ಮಹತ್ತರ ಅಭಿವೃದ್ಧಿಗೆ ದಿವಂಗತ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಕಾರಣ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ತಿಳಿಸಿದರು.

ನಗರದ ಎಂಸಿಸಿ ಎ ಬ್ಲಾಕ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಇಂಟಕ್ ವಿಭಾಗ ಭಾನುವಾರ ಹಮ್ಮಿಕೊಂಡಿದ್ದ ದಿವಂಗತ ರಾಜೀವ್ ಗಾಂಧಿ ಅವರ 32ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜೀವ್ ಗಾಂಧಿ ಅತಿ ಕಿರಿಯ ವಯಸ್ಸಿನಲ್ಲಿ ಪ್ರಧಾನಿಯಾಗಿದ್ದರು. 5 ವರ್ಷಗಳ ಕಾಲ ದೇಶಕ್ಕೆ ಉತ್ತಮ ಆಡಳಿತ ನೀಡಿದ್ದರು. 18 ವರ್ಷದ ಯುವಕ, ಯುವತಿಯರಿಗೆ ಮತದಾನದ ಹಕ್ಕು ನೀಡಿದರು ಎಂದರು.

ತಂತ್ರಜ್ಞಾನ ಅಭಿವೃದ್ಧಿಯ ಬಗ್ಗೆ ಕನಸು ಹೊಂದಿದ್ದರು. ಟೆಲಿಕಾಂನಲ್ಲಿ ಕ್ರಾಂತಿ ಮಾಡಿ, ಹೊಸ ಶಿಕ್ಷಣ ನೀತಿ ಜಾರಿಗೆ ತಂದರು ಎಂದು ತಿಳಿಸಿದರು.

ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಲಿದೆ. 2013ರಲ್ಲಿ ಸಿದ್ದರಾಮಯ್ಯ ಸರ್ಕಾರ 165 ಅಂಶಗಳ ಪ್ರಣಾಳಿಕೆಯಲ್ಲಿ 158 ಭರವಸೆಗಳನ್ನು ಈಡೇರಿಸಿದೆ. ಅದೇ ರೀತಿ ಈ ಬಾರಿ ಕೂಡ 5 ಗ್ಯಾರಂಟಿಗಳನ್ನು ಜನರಿಗೆ ನೀಡಲಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಮಂಜುನಾಥ್, ಮಹ್ಮದ್ ಜಿಕ್ರಿಯ, ಕೆ.ಜಿ. ರಹಮತ್ ಉಲ್ಲಾ, ಎನ್.ಎಸ್. ವೀರಭದ್ರಪ್ಪ, ಡಿ.ಶಿವಕುಮಾರ್, ಆರ್.ಬಿ. ಬಾಷಾ, ಬಿ.ಎಸ್. ಸುರೇಶ್, ಮುಬಾರಕ್, ಹರೀಶ್, ನವೀನ್, ರಿಯಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net