ದಾವಣಗೆರೆಯಲ್ಲಿ ಮಲ್ಲಿಕಾ-ಸಾಂಸ್ಕೃತಿಕ ಮೇಳ 29, 30ಕ್ಕೆ

IMG-20230527-WA0038.jpg
Published on

ದಾವಣಗೆರೆ: ನಗರದ ಜಿಎಂಐಟಿ ಕಾಲೇಜಿನಲ್ಲಿ ಮೇ 29, 30ರಂದು ಮಲ್ಲಿಕಾ-2023 ಕ್ರೀಡಾ ಮತ್ತು ಸಾಂಸ್ಕೃತಿಕ ಮೇಳ ಆಯೋಜಿಸಲಾಗಿದೆ ಎಂದು ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ. ಡಾ.ಪಿ.ಎಸ್. ಬಸವರಾಜ್ ತಿಳಿಸಿದರು.

ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಜೈವಿಕ ತಂತ್ರಜ್ಞಾನ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ರ‌್ಯಾಂಕ್ ವಿಜೇತ ನಾಲ್ವರಿಗೆ ತಲಾ 2.40 ಲಕ್ಷ ರೂ.ಗಳ ಟ್ಯೂಷನ್ ಶುಲ್ಕ ಹಿಂತಿರುಗಿಸಲಾಗುವುದು. 9.5 ಸಿಜಿಪಿಎ ಅಂಕ ಪಡೆದ 9 ವಿದ್ಯಾರ್ಥಿಗಳಿಗೆ 1 ತೊಲ ಚಿನ್ನದ ಪದಕಗಳನ್ನು ನೀಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

29ರಂದು ಸಂಜೆ 5 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ಖಜಾಂಚಿ ಜಿ.ಎಸ್. ಅನಿತ್ ಕುಮಾರ್ ಭಾಗವಹಿಸುವರು. ಗೌರವ ಅತಿಥಿಗಳಾಗಿ ಸಂಗೀತ ನಿರ್ದೇಶಕ ವಿ.ಮನೋಹರ್, ಕಾಮಿಡಿ ಕಿಲಾಡಿಗಳು, ಮಜಾಭಾರತದ ಹಾಸ್ಯ ನಟ-ನಟಿಯರಾದ ಸಂತೋಷ, ಕುಂದಾಪುರ ಸೂರ್ಯ, ಮಾನಸಾ ಮತ್ತು ವಾಣಿ ಭಾಗವಹಿಸುವರು. ಶ್ರೀಶೈಲ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಟಿ.ಎಂ.ಲಿಂಗರಾಜು, ಪ್ರಾಚಾರ್ಯ ಡಾ. ಎಂ.ಬಿ.ಸಂಜಯ ಖಂಡೆ, ಕಾರ್ಯಕ್ರಮದ ಸಂಯೋಜಕ ಡಾ.ಪಿ.ಎಸ್.ಬಸವರಾಜ ಭಾಗವಹಿಸುವರು.

ಎರಡನೇ ದಿನದ ಕಾರ್ಯಕ್ರಮಕ್ಕೆ, ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್, ಟ್ರಸ್ಟ್ ಅಧ್ಯಕ್ಷ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ, ಕಾರ್ಯದರ್ಶಿ ಜಿ.ಎಂ. ಲಿಂಗರಾಜ, ಜಿ.ಎಂ.ಪ್ರಸನ್ನಕುಮಾರ್ ಭಾಗವಹಿಸುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತರಬೇತಿ ಮುಖಸ್ಥ ತೇಜಸ್ವಿ ಕಟ್ಟಿಮನಿ, ಪ್ರೊ.ಕೆ.ಎಸ್.ಓಂಕಾರಪ್ಪ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net