ದಾವಣಗೆರೆಯಲ್ಲಿ ಕಾರು ಅಪಘಾತ -ಗಾಯಾಳುಗಳನ್ನು ರಕ್ಷಿಸಿದ ಮಾಜಿ ಮೇಯರ್ ಅಜಯ್

dvg-ajaykumar-neravu-sep-30-1.jpg
Published on

ದಾವಣಗೆರೆ: ನಗರ ಸಮೀಪದ ಮಲ್ಲಶೆಟ್ಟಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಕಾರೊಂದು ಅಪಘಾತಕ್ಕೀಡಾಗಿ, ರಸ್ತೆ ಬದಿ ಉರುಳಿ ಬಿದ್ದಿದ್ದು, ಅದರಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್ ಸ್ಥಳೀಯರ ನೆರವಿನೊಂದಿಗೆ ರಕ್ಷಣೆ ಮಾಡಿದ್ದಾರೆ.

ಬೆಳಗ್ಗೆ 11 ಗಂಟೆಗೆ ಶಿರಸಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ನಂತರ ಹೆದ್ದಾರಿ ಪಕ್ಕಕ್ಕೆ ಉರುಳಿತು. ಇದೇ ಮಾರ್ಗವಾಗಿ ಕೂಡ್ಲಿಗೆಗೆ ತೆರಳುತ್ತಿದ್ದ ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್ ಸಹಾಯವಾಣಿ 112 ಹಾಗೂ 108 ಆಂಬುಲೆನ್ಸ್‌ಗೆ ಕರೆ ಮಾಡಿದರು. ಆದರೆ, ಅವು ಸಹಾಯಕ್ಕೆ ಧಾವಿಸದಿದ್ದಾಗ ಸ್ಥಳೀಯರ ನೆರವಿನೊಂದಿಗೆ ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿದರು. ಅದರಲ್ಲಿ ಪ್ರಯಾಣಿಸುತ್ತಿದ್ದ, ಬೆಂಗಳೂರಿನ ನಿವಾಸಿಗಳಾದ ನರಸಿಂಹ ಗರಡಿ, ಲೀಲಾವತಿ, ಮಕ್ಕಳಾದ ದೀಪ್ತಿ, ಮಹಾಬಲೇಶ್ವರ ಅವರನ್ನು ಖಾಸಗಿ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net