ದಾವಣಗೆರೆಯ ರಾಂ ಆ್ಯಂಡ್ ಕೋ ಗಣೇಶ ಮೂರ್ತಿ ವಿಸರ್ಜನೆ

pixlr_20231001074728784.jpg
Published on

ದಾವಣಗೆರೆ: ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ರಾಂ ಆ್ಯಂಡ್ ಕೋ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ನಗರದಲ್ಲಿ ಶನಿವಾರ ಅದ್ದೂರಿಯಾಗಿ ನೆರವೇರಿತು.

ಮೂಡಬಿದರೆಯ ಚಂಡೆ ವಾದ್ಯ, ಉಡುಪಿಯ ಹುಲಿ ವೇಷ, ರಾಣೆಬೆನ್ನೂರಿನ ವೀರಗಾಸೆ, ನಾಡಿಕ್ ಡೋಲು, ಡೊಳ್ಳು ಮೊದಲಾದ ಜಾನಪದ ತಂಡಗಳು ಮೆರವಣಿಗೆಯಲ್ಲಿ ಸದ್ದು ಮಾಡಿದವು.

ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಿಂದ ಎವಿಕೆ ಕಾಲೇಜು ರಸ್ತೆ, ಚೇತನಾ ಹೋಟೆೆಲ್ ರಸ್ತೆೆ, ಅರುಣ ಚಿತ್ರಮಂದಿರ ಮೂಲಕ ಪಿ.ಬಿ. ರಸ್ತೆ ಮೂಲಕ ಹರಿಹರದ ಭದ್ರಾ ನದಿವರೆಗೆ ಮೆರವಣಿಗೆ ನಡೆಸಲಾಯಿತು. ನಂತರ ಅಲ್ಲಿ ಗಣೇಶನನ್ನು ವಿಸರ್ಜನೆ ಮಾಡಲಾಯಿತು.

ತಲೆಗೆ ಕೇಸರಿ ಬಣ್ಣದ ವಿಶೇಷ ರುಮಾಲು, ಶಲ್ಯ ಧರಿಸಿದ್ದ ಯುವಕರು ಗಮನ ಸೆಳೆದರು. ರಾಂ ಆ್ಯಂಡ್ ಕೋ ಗೆಳೆಯರ ಬಳಗದ ಅಧ್ಯಕ್ಷ ನಾಗೇಂದ್ರ ರೆಡ್ಡಿ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net