

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆ ಸೃಷ್ಟಿಸಿಕೊಂಡಿರುವ ದಾಳಿಂಬೆ ಕೃಷಿಯತ್ತ ರೈತರು ಒಲವು ತೋರಿಸುತ್ತಿದ್ದಾರೆ. ತೋಟಗಾರಿಕೆ ಬೆಳೆಯಲ್ಲಿ ದ್ರಾಕ್ಷಿಗಷ್ಟೇ ಸೀಮಿತವೆನಿಸಿದ್ದ ಜಿಲ್ಲೆ ಈಗ ದಾಳಿಂಬೆ ಕೃಷಿಯಲ್ಲೂ ಸೈ ಎನಿಸಿಕೊಳ್ಳುತ್ತಿದೆ.
ಜಿಲ್ಲಾದ್ಯಂತ ಪ್ರಸ್ತುತ 400 ಎಕರೆಯಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ದೇವನಹಳ್ಳಿ ತಾಲೂಕು ಬಾಲೇಪುರದಲ್ಲಿ 8 ಎಕರೆ ದಾಳಿಂಬೆ ಬೆಳೆದು ದಾಖಲೆ ಬರೆಯಲಾಗಿದೆ.
ಬರಪೀಡಿತ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯಲ್ಲಿ ಈಗಾಗಲೇ 1800 ಅಡಿ ಕೊರೆದರೂ ಕೊಳವೆಬಾವಿಗಳಲ್ಲಿ ನೀರು ಸಿಗುವುದು ಅನುಮಾನ ಎಂಬ ಪರಿಸ್ಥಿತಿ ಇದೆ. ಇಂಥ ಪರಿಸ್ಥಿತಿಯಲ್ಲೂ ಭರ್ಜರಿಯಾಗಿ ದಾಳಿಂಬೆ ಬೆಳೆದ ರೈತರು ಇತರರಿಗೆ ಮಾದರಿ ಎನಿಸಿದ್ದಾರೆ. ದ್ರಾಕ್ಷಿ ಬೆಳೆಗಿಂತ ಲಾಭದಾಯಕ ಎನಿಸಿರುವ ದಾಳಿಂಬೆ ಕೃಷಿಯತ್ತ ರೈತರು ಒಲವು ತೋರಿಸುತ್ತಿದ್ದಾರೆ.
ಮಳೆ ನೀರು ಆಧಾರ: ಬಾಲೇಪುರದಲ್ಲಿ ಸದ್ಯ ಬೆಳೆಯಲಾಗಿರುವ 8 ಎಕರೆ ದಾಳಿಂಬೆ ಬೆಳೆಗೆ ಮಳೆ ನೀರು ಪ್ರಮುಖ ಆಧಾರವಾಗಿದೆ. ಕಮ್ಯೂನಿಟಿ ಪಾಂಡ್ ಮೂಲಕ ವರ್ಷಪೂರ್ತಿ ಬೆಳೆಗೆ ನೀರುಣಿಸುವಲ್ಲಿ ರೈತರು ಸಲರಾಗಿದ್ದಾರೆ. ಇಡೀ ಜಮೀನಿನಲ್ಲಿ ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಅತ್ಯಲ್ಪ ನೀರಿನಲ್ಲೇ ಉತ್ತಮ ಸಲು ಕಾಣಲು ಸಾಧ್ಯವಾಗಿದೆ.
ತೋಟಗಾರಿಕೆ ಇಲಾಖೆ ಸಹಕಾರ: ಗ್ರಾಮಾಂತರ ಜಿಲ್ಲಾ ತೋಟಗಾರಿಕೆ ಇಲಾಖೆ, ದಾಳಿಂಬೆ ಕೃಷಿ ಉತ್ತೇಜಿಸುವ ಸಲುವಾಗಿ ಸಹಾಯಧನ ವಿತರಿಸುತ್ತಿದೆ. ಬಾಲೇಪುರದಲ್ಲಿ ಕಮ್ಯೂನಿಟಿ ಪಾಂಡ್ ನಿರ್ಮಾಣಕ್ಕೆ 4 ಲಕ್ಷ ರೂ., ಹನಿ ನೀರಾವರಿಗೆ 80 ಸಾವಿರ ರೂ., ಹಣ್ಣುಗಳ ಪ್ಯಾಕಿಂಗ್ ಸಿಸ್ಟಂಗೆ 2 ಲಕ್ಷ ರೂ. ಸಹಾಯಧನ ನೀಡಲಾಗಿದೆ. ಇಲ್ಲಿನ ಕಮ್ಯೂನಿಟಿ ಪಾಂಡ್‌ನಲ್ಲಿ ಸುಮಾರು 1 ಕೋಟಿ ಲೀಟರ್ ನೀರು ಸಂಗ್ರಹ ಸಾಮರ್ಥ್ಯವಿದ್ದು ವರ್ಷಪೂರ್ತಿ ಹನಿನೀರಾವರಿ ಮೂಲಕ ಬೆಳೆ ಬೆಳೆಯಬಹುದಾಗಿದೆ.
ವಿಶೇಷತೆ ಏನು?: ಈಗ ಬೆಳೆದಿರುವ ದಾಳಿಂಬೆ ಬಗ್ಬಾ ತಳಿಯಾಗಿದ್ದು, ಒಂದು ಹಣ್ಣು ಸರಾಸರಿ 600 ಗ್ರಾಂ ತೂಗುತ್ತದೆ. ಉತ್ತಮ ಪೋಷಣೆ ಮಾಡಿದರೆ ಇನ್ನೂ ಹೆಚ್ಚಿನ ತೂಕ, ಗುಣಮಟ್ಟದ ದಾಳಿಂಬೆ ಬೆಳೆಯಬಹುದು. ಈ ತಳಿಯ ಹಣ್ಣುಗಳಿಗೆ ದೇಶದ ಎಲ್ಲ ಪ್ರಮುಖ ಮಾರುಕಟ್ಟೆಗಳಲ್ಲಿ ಬೇಡಿಕೆ ಇದೆ. ದುಬೈ ಸೇರಿ ಹೊರದೇಶಗಳಿಗೂ ರ‌್ತಾಗುತ್ತಿದೆ.
ಇಲಾಖೆಯಿಂದ ಕೂಲಿಂಗ್ ಯೂನಿಟ್:
ಮಾರುಕಟ್ಟೆಯಲ್ಲಿ ಬೇಡಿಕೆ ಏರಿಳಿತದ ಹಿನ್ನೆಲೆಯಲ್ಲಿ ತಿಂಗಳುಗಟ್ಟಲೇ ಹಣ್ಣುಗಳನ್ನು ಸಂರಕ್ಷಿಸುವ ಸಲುವಾಗಿ ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ಕೂಲಿಂಗ್ ಯೂನಿಟ್ ವಿತರಣೆಗೆ ಸಿದ್ಧತೆ ನಡೆದಿದೆ. ಇದಕ್ಕೂ ಇಲಾಖೆಯಿಂದ ಸಹಾಯಧನವಿದ್ದು, ಆಸಕ್ತ ರೈತರು ಸದ್ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಪುಮಣ್ಣು ಸೂಕ್ತ: ದಾಳಿಂಬೆ ಬೆಳೆಗೆ ಕೆಂಪು ಮಣ್ಣು ಸೂಕ್ತವಾಗಿದೆ. ಈ ಭಾಗದಲ್ಲಿ ಹೆಚ್ಚೆಚ್ಚು ದ್ರಾಕ್ಷಿ ಬೆಳೆಯುತ್ತಿದ್ದರು. ದ್ರಾಕ್ಷಿಗಿಂತ ದಾಳಿಂಬೆ ಲಾಭದಾಯಕ ಎಂಬ ನಿಟ್ಟಿನಲ್ಲಿ ರೈತರು ದಾಳಿಂಬೆ ಬೆಳೆಯತ್ತ ಆಸಕ್ತಿ ತೋರಿಸುತ್ತಿದ್ದಾರೆ.
ತೋಟಗಾರಿಕೆ ಇಲಾಖೆ ಯೋಜನೆಯಡಿ ನಿರ್ಮಿಸಲಾಗಿರುವ ಬಾಲೇಪುರ ದಾಳಿಂಬೆ ಾರ್ಮ್‌ಹೌಸ್‌ಗೆ ಇತ್ತೀಚಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹೇಮಲತಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜಿಲ್ಲೆಯಲ್ಲಿ ಮತ್ತಷ್ಟು ರೈತರನ್ನು ದಾಳಿಂಬೆ ಬೆಳೆಯತ್ತ ಆಕರ್ಷಿಸಲು ಕ್ರಮಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು.
ನಾಲ್ಕೂ ತಾಲೂಕು ಸೇರಿ ಜಿಲ್ಲೆಯಲ್ಲಿ ಪ್ರಸ್ತುತ 400 ಎಕರೆಯಲ್ಲ್ಲಿ ದಾಳಿಂಬೆ ಬೆಳೆಯಲಾಗುತ್ತಿದ್ದು, ಬಾಲೇಪುರದ ದಾಳಿಂಬೆ ಾರ್ಮ್‌ಹೌಸ್‌ಗೆ ಮುಂಚೂಣಿಯಲ್ಲಿದೆ. ತೋಟಗಾರಿಕೆ ಇಲಾಖೆಯಿಂದ ಸಹಾಯಧನದ ರೂಪದಲ್ಲಿ ಎಲ್ಲ ಸವಲತ್ತುಗಳನ್ನು ನೀಡುತ್ತಿದ್ದು ದಾಳಿಂಬೆ ಬೆಳೆಗೆ ಉತ್ತೇಜಿಸಲಾಗುತ್ತಿದೆ. ಮಹಾಂತೇಶ್ ಮರಗೂಡು, ಉಪನಿರ್ದೇಶಕ ತೋಟಗಾರಿಕೆ ಇಲಾಖೆ