ದಾರ್ಶನಿಕರ ಬದುಕು ಪ್ರೇರಣೆ

TKE kanakaa
ನೇರಲಕೆರೆ ಗ್ರಾಮದ ಶ್ರೀ ಅಮತೇಶ್ವರ ಪ್ರೌಢಶಾಲೆಯಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಕಿ ಮಂಜುಳಾ ಮಲ್ಲಿಗವಾಡ ಮಾತನಾಡಿದರು. ಕೆ.ಟಿ.ಹಾಲೇಶ್, ಸತೀಶ್, ರಮಾಕಾಂತ್, ಪಂಚಾಕ್ಷರಪ್ಪ ಇತರರಿದ್ದರು.
Published on

ತರೀಕೆರೆ: ಕನಕದಾಸರ ಕೀರ್ತನೆ ಆಲಿಸಿದರೆ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ ಎಂದು ಶ್ರೀ ಅಮತೇಶ್ವರ ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ಟಿ.ಹಾಲೇಶ್ ಹೇಳಿದರು.

ನೇರಲಕೆರೆ ಗ್ರಾಮದ ಶ್ರೀ ಅಮತೇಶ್ವರ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕದಾಸರು ರಚಿಸಿರುವ ಒಂದೊಂದು ಕೀರ್ತನೆಯೂ ಅರ್ಥಗರ್ಭಿತ. ಸಮಾಜದ ಏಳಿಗಾಗಿ ಶ್ರಮಿಸಿದ ದಾರ್ಶನಿಕರು ಮತ್ತು ಸಂತರ ನಿಸ್ವಾರ್ಥ ಬದುಕು ನಮಗೆ ಪ್ರೇರಣೆಯಾಗಬೇಕು ಎಂದರು. ಸಹ ಶಿಕ್ಷಕರಾದ ಖಿಜರ್ ಖಾನ್, ರಮಾಕಾಂತ್, ಸವಿತಮ್ಮ, ಸತೀಶ್, ಮಂಜುಳಾ ಮಲ್ಲಿಗವಾಡ, ಪಂಚಾಕ್ಷರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net