ದಾರ್ಶನಿಕರ ಆದರ್ಶಗಳ ಅಳವಡಿಕೆಗೆ ಸಲಹೆ

CTD--0001
Published on

ಚಿತ್ರದುರ್ಗ:ನಾಡಿನ ಮಹಾನ್ ದಾರ್ಶನಿಕರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳ ಬೇಕಿದೆ ಎಂದು ಪ್ರಭಾರ ಮುಖ್ಯಶಿಕ್ಷಕ ಎಸ್.ಬಿ.ಸಣ್ಣತಿ ಪ್ಪಯ್ಯ ಹೇಳಿದರು.

ರಂಗ ಸೌರಭ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಆಶ್ರಯದಲ್ಲಿ ಚಿತ್ರದುರ್ಗ ವಿದ್ಯಾಸಂಸ್ಥೆಯ ವಿಜಾಪುರದ ಶಬರ ಶಂಕರ ವಸತಿ ಸಾಮೂಹಿಕ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಾಡಗೀತೆ, ರಾಷ್ಟ್ರಗೀತೆ,ರೈತಗೀತೆ ಗಳನ್ನು ಪ್ರಾಯೋಗಿಕ ತರಬೇತಿ,ಕವಿ ಕಾವ್ಯ ಪರಿಚಯ ಹಾಗೂ ಕನ್ನಡ ಗೀತ ಗಾಯನದೊಂದಿಗೆ ಯೋಗ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪುಸ್ತಕಗಳು ಸಮಾಜದಲ್ಲಿ ತಲೆ ಎತ್ತುವಂತೆ ಮಾಡುತ್ತವೆ. ಆದರೆ ಮೊಬೈಲ್‌ಗಳು ತಲೆ ತಗ್ಗಿಸುವಂತೆ ಮಾಡುತ್ತವೆ. ಸಾಹಿತ್ಯ ಲೋಕಕ್ಕೆ ಸಾಹಿತಿಗಳ ಕೊಡುಗೆ ಅಪಾರ. ಯುವಜನರು ದುಶ್ಚಟಗಳಿಗೆ ಬಲಿಯಾಗದೆ, ಸಮಾಜಕ್ಕೆ ಮಾದರಿಯಾಗಿ ಬದುಕಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಶಿಕ್ಷಕ ಎಂ.ಎಸ್.ಗೋವಿಂದರೆಡ್ಡಿ ಮಾತನಾಡಿ,ಮಾತೃಭಾಷೆಗೆ ಮೊದಲ ಪ್ರಾಶಸ್ತ್ಯ ಕೊಡಬೇಕೆಂದರು.

ರಂಗ ನಿರ್ದೇಶಕ ಕೆಪಿಎಂ.ಗಣೇಶಯ್ಯ,ಯೋಗ ಶಿಕ್ಷಕ ಎಂ.ಬಿ.ಮುರುಳಿ, ಎಂ.ಲಕ್ಷ್ಮೀ,ಶಿಕ್ಷಕರಾದ ಬಿಂದುಶ್ರೀ,ಎಸ್.ಕಾಂಚನಾ,ಎಚ್.ಚಂದ್ರ ಮ್ಮ, ಸಿದ್ದಯ್ಯ,ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಇ.ಮಹಾಂತೇಶ, ಕಚೇರಿ ಅಧೀಕ್ಷಕ ಸಂಜಯ್,ರವಿ,ಪೂಜಾ,ಹೀನಾ ಮತ್ತಿತರರು ಇದ್ದರು. ಕೆ.ಪಿ.ಲಾವಣ್ಯ ಪ್ರಾರ್ಥಿಸಿ,ಸಣ್ಣಪಾಲಯ್ಯ ವಂದಿಸಿದರು. ಜಿ.ಎನ್.ದಿವ್ಯಾ ನಿರೂಪಿಸಿದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net