ದಾರಿಹೋಕರ ಅಡ್ಡಗಟ್ಟಿ ಕಳ್ಳತನ, ಪೊಲೀಸ್ ರ ಚುರುಕಿನ ಕಾರ್ಯಾಚರಣೆ, ಏಳು ದರೋಡೆಕೋರರ ಬಂಧನ

1660891650725
Published on

ವಿಜಯಪುರ: ದಾರಿಹೋಕರನ್ನು ಅಡ್ಡಗಟ್ಟಿ ಹೊಡಿ ಬಡಿ‌ ಮಾಡಿ‌ ಹಣ, ಮೊಬೈಲ್ ಮತ್ತಿತರ ಸಾಮಗ್ರಿ ದೋಚುತ್ತಿದ್ದ ದರೋಡೆಕೋರರನ್ನು ಪೊಲೀಸರು ಹೆಡೆಮುರಿ ಕಟ್ಟಿ ತಂದಿದ್ದಾರೆ.

ಇಲ್ಲಿನ ಇಟ್ಟಂಗಿಹಾಳ ಕ್ರಾಸ್ ಹತ್ತಿರ ಆ. 12 ರಂದು ಮೂರು ಬೈಕ್ ಗಳ ಮೇಲೆ ತೆರಳುತ್ತಿದ್ದ ದಾರಿಹೋಕರನ್ನು ಆರೇಳು ಜನರ ಗುಂಪು ಅಡ್ಡಗಟ್ಟಿ, ಹೊಡಿಬಡಿ ಮಾಡಿ ದರೋಡೆಗೈದಿತ್ತು.

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಏಳು ಜನರನ್ನು ಬಂಧಿಸಿದ್ದಾರೆ.

ವಿಜು ಅಲಿಯಾಸ್ ವಿಜಯ ಭೀರಪ್ಪ ಕರಾಡೆ (23), ಆನಂದ ಮಾಯಪ್ಪ ಡೇರರೆ, ಸಚಿನ ಮಧು ಗೋಪಣೆ(20), ನವನಾಥ ಅಮಗೊಂಡ ಕರಾಡೆ(20), ಸಚಿನ ವಿಲಾಸ ಕಾಳೆ (21), ವಿಕಾಸ ಲಕ್ಣ್ಮಣ ಢಾಣೆ (20) ಹಾಗೂ ಹಣಮಂತ ಜಯಪ್ಪ ಖರಾತ (20) ಬಂಧಿತ ಆರೋಪಿಗಳು.

ಇವರಿಂದ 28 ಸಾವಿರ ರೂ. ಮೌಲ್ಯದ ಎರಡು ಮೊಬೈಲ್,

2500 ರೂ.ಮೌಲ್ಯದ ಕೈಗಡಿಯಾರ, 8200 ರೂ.ನಗದು, ಬೈಕ್ ಸೇರಿ ಒಟ್ಟು 5.13 ಲಕ್ಷ ರೂ.ಮೌಲ್ಯದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ.

ಎಸ್ ಪಿ ಎಚ್.ಡಿ. ಆನಂದಕುಮಾರ ಹಾಗೂ ಎಎಸ್ ಪಿ ರಾಮ ಅರಸಿದ್ದಿ ಮಾರ್ಗದರ್ಶನ ದಲ್ಲಿ ಡಿವೈಎಸ್ ಪಿ ಸಿದ್ಧೇಶ್ವರ, ಸಿಪಿಐ ಸಂಗಮೇಶ ಫಾಲಬಾವಿ, ಪಿಎಸ್ ಐ ಜಿ.ಎಸ್. ಉಪ್ಪಾರ, ಆರ್.ಎ.ದಿನ್ನಿ ನೇತೃತ್ವದಲ್ಲಿ ಸಿಬ್ಬಂದಿಯಾದ ಎಂ‌.ಎನ್‌.ಮುಜಾವರ, ಐ.ವೈ. ದಳವಾಯಿ, ಎ.ಎಸ್. ಬಿರಾದಾರ, ಗುರು ಹಡಪದ, ಎಂ.ಎಚ್. ಬಂಕಲಗಿ, ಬಿ.ವಿ. ಪವಾರ, ಹಣಮಂತ ಬಿರಾದಾರ, ಎಂ.ಎಸ್.ಮೇಟಿ, ಹಣಮಂತ ಗೊಳಸಂಗಿ, ಪಿ.ಸಿ.‌ಬಾವೂರ ಇವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು. ತಂಡಕ್ಕೆ ಬಹುಮಾನ ಘೋಷಿಸಿದ್ದಾಗಿ ಎಸ್ ಪಿ ಎಚ್.ಡಿ. ಆನಂದಕುಮಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net