ದಾಬಾ ಮಾಲೀಕನ ಕೊಲೆ ಪ್ರಕರಣ, ಐವರ ಬಂಧನ

Crime Ravi
ಎಂ.ಕೆ.ಹುಬ್ಬಳ್ಳಿ ಪಟ್ಟಣದ ದಾಬಾ ಮಾಲೀಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರು ಠಾಣೆ ಪೊಲೀಸರು ಐವರನ್ನು ಸೋಮವಾರ ಬಂಧಿಸಿದ್ದಾರೆ. ಹೆಚ್ಚುವರಿ ಡಿವೈಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‌ಐ ಶಂಕ್ರಯ್ಯ ಮಾವಿನಕಟ್ಟಿ ಹಾಗೂ ಸಿಬ್ಬಂದಿ ಆರ್.ಎಸ್.ಶೀಲಿ, ಎಸ್.ಎಸ್.ಕಾಜಗಾರ ಇದ್ದರು.
Published on

ಬೆಳಗಾವಿ: ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದ ದಾಬಾ ಮಾಲೀಕ ಪ್ರಕಾಶ ನಾಗನೂರ (38) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರು ಠಾಣೆ ಪೊಲೀಸರು ಐದು ಜನರನ್ನು ಸೋಮವಾರ ಬಂಧಿಸಿದ್ದಾರೆ. ಎಂ.ಕೆ.ಹುಬ್ಬಳ್ಳಿ ನಿವಾಸಿಗಳಾದ ಅಬ್ದುಲ್ ಅಜೀಜ್ ಬಡೇಗಾರ, ಮಹ್ಮದ್‌ಶಫಿ ಬಡೇಗಾರ, ಶಕೀಲ್‌ಅಹ್ಮದ್ ಬಡೇಗಾರ, ಇರ್ಫಾನ್ ಬಡೇಗಾರ, ಸಾಜೀದ್ ಬಡೇಗಾರ ಬಂಧಿತರು. ಕಾರು ವಶಕ್ಕೆ ಪಡೆಯಲಾಗಿದ್ದು, ಬಿಲಾಲ ಬಡೇಗಾರ, ಸರ್ಪರಾಜ್ ಬಡೆಗಾರ, ಷಹಬಾಜ್ ಬಡೇಗಾರ ಹಾಗೂ ಇತರ ಆರೋಪಿತರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಬಾ ಮ್ಯಾನೇಜರ್ ಉಮೇಶ ಗಂಗಪ್ಪನವರ ಅವರು ಪೊಲೀಸರಿಗೆ ದೂರು ನೀಡಿದ್ದು, ಕಿತ್ತೂರು ಪೊಲೀಸ್ ಠಾಣೆಯಲ್ಲಿ 8 ಜನರ ಹೆಸರು ಉಲ್ಲೇಖಿಸಿ ಇನ್ನೂ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net