

ಹಗರಿಬೊಮ್ಮನಹಳ್ಳಿ: ಶಿಕ್ಷಕರ ನಿವೃತ್ತಿ ಪಿಂಚಣಿಗೆ ಸಂಬಂಧಿಸಿದಂತೆ ಚಳಿಗಾಲದ ಅಧಿವೇಶನದಲ್ಲಿ ಮಾತನಾಡುವೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಶಿಕ್ಷಣ ಇಲಾಖೆ ಮತ್ತು ತಾಲೂಕು ಮಟ್ಟದ ಇಲಾಖೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆಯ ತಾಲೂಕು ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿ 138 ಶಾಲೆಗಳ ಅಭಿವೃದ್ಧಿಗಾಗಿ 81 ಕೋಟಿ ರೂ. ನೀಡಲಾಗಿದೆ, ದಾನಿಗಳು ಮುಂದೆ ಬಂದು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಕೋರಿದರು.
ಬಿಇಒ ಮೈಲೇಶ ಬೇವೂರ್ ಮಾತನಾಡಿ, ಶಿಕ್ಷಕರು ಸಮಾಜಕ್ಕೆ ವಿಶಿಷ್ಠ ಕೊಡುಗೆ ನೀಡಬೇಕು ಎಂದು ತಿಳಿಸಿದರು. ಶಿಕ್ಷಕರಾದ ಕುಡುತಿನಿಮಗ್ಗಿ ಶಾಲೆಯ ಜೆ.ರಿಯಾಜ್ ಬಾಷ, ವಲ್ಲಾಭಾಪುರ ಶಾಲೆಯ ಕೆ.ಲಕ್ಷ್ಮೀ, ಆನೇಕಲ್ಲು ತಾಂಡಾದ ನಾಗಭೂಷಣ, ಕೆಚ್ಚಿನಬಂಡಿ ಶಾಲೆಯ ಬಿ.ರಾಮಣ್ಣ, ಚಿಲುಗೋಡು ಶಾಲೆಯ ಎಸ್.ಎಂ.ಶಾಂತಮೂರ್ತಿ, ಬಸರಕೋಡು ಪ್ರೌಢಶಾಲೆಯ ಎಸ್.ಮಹಾಂತೇಶ, ಪಿಂಜಾರ್ ಹೆಗ್ಡಾಳ್ ಮುಖ್ಯ ಶಿಕ್ಷಕ ಪಿ.ಜಿ.ಸುರೇಶಗೌಡ, ಬಿಆರ್‌ಪಿ ಟಿ.ಮಂಜುನಾಥ, ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ವಿ.ಹುಲುಗಪ್ಪ, ಶೈಕ್ಷಣಿಕ ಅಭಿವೃದ್ಧಿಗಾಗಿ ವಿವಿಧ ಸರ್ಕಾರಿ ಶಾಲೆಗಳಿಗಾಗಿ ಒಂದು ಲಕ್ಷ ರೂ. ಠೇವಣಿ ಇಟ್ಟಿರುವ ಬಣಕಾರ ಬಸವರಾಜ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕೊಟ್ರಬಸಪ್ಪ, ನಿವೃತ್ತ ಶಿಕ್ಷಕ ಕೊಟ್ರೇಶಪ್ಪ, ಗುರುಭವನ ಸ್ಥಳದಾನಿಗಳಾದ ಮುದಗಲ್ ಶ್ರೀನಿವಾಸ ಶೆಟ್ರು ಅವರನ್ನು ಗೌರವಿಸಲಾಯಿತು.
ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶಿಕ್ಷಕರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿಪತ್ರ ಮತ್ತು ಬಹುಮಾನ ನೀಡಲಾಯಿತು. ನಂದಿಪುರ ಕ್ಷೇತ್ರದ ಡಾ.ಮಹೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಪುರಸಭೆ ಅಧ್ಯಕ್ಷ ಮರಿರಾಮಣ್ಣ, ಗುರುಬಸವರಾಜ ಸೊನ್ನದ್, ತಾ.ಪಂ.ಇಒ ಲಕ್ಷ್ಮೀಕಾಂತ್, ರಾಜಕುಮಾರ, ಕ್ಷೇತ್ರಸಮನ್ವಯಾಧಿಕಾರಿ ಪ್ರಭಾಕರ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹ್ಯಾಟಿ ಲೋಕಪ್ಪ ಮತ್ತಿತರರು ಇದ್ದರು.