ದಾನಿಗಳ ನೆರವಿನಿಂದ ಸಾಧನೆಗೈದ ಪ್ರತಿಭೆಗಳು

1 Rohan Hubballi
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ವಿದ್ಯಾಪೋಷಕ ಸಂಸ್ಥೆಯ ಸಹಯೋಗದಲ್ಲಿ ದಾನಿಗಳ ನೆರವು ಪಡೆದ 9 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದು ಸಾಧನೆಗೈದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ರೋಹನ್ ಹುಬ್ಬಳ್ಳಿ ಶೇ. 98.33, ಗಾಯತ್ರಿ ದ್ಯಾವನೂರ ಶೇ. 97.83, ಮಣಿಕಾಂತ್ ಸುಂಕದ ಶೇ. 95.83, ಭೂಮಿಕಾ ಹೊಸಗೌಡರ ಶೇ. 95.5, ನಾಗವೇಣಿ ವಾರದ ಶೇ. 91.16 ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಕೀರ್ತಿ ಮಾಳಗಿ ಶೇ. 94.3, ಅಕ್ಷತಾ ಗಿಡದಹುಬ್ಬಳ್ಳಿ ಶೇ. 93.16, ಪ್ರೀತಿ ಬದ್ಲಿ ಶೇ. 92.16, ಲಕ್ಷ್ಮೀಬಾಯಿ ಪಾಟೀಲ ಶೇ. 91.5 ಅಂಕ ಗಳಿಸಿದ್ದಾರೆ.

ಈ ವಿದ್ಯಾರ್ಥಿಗಳು ಕೃಷಿ ಕಾರ್ಮಿಕರು, ಮನೆಗೆಲಸ, ಕ್ಷೌರಿಕ, ಕಟ್ಟಡ ಕೆಲಸ ಮಾಡುವವರು, ಬಡಿಗತನ, ಕಮ್ಮಾರಿಕೆ, ಟೈಲರಿಂಗ್ ಕೆಲಸಗಳಲ್ಲಿ ತೊಡಗಿರುವ ಕುಟುಂಬದಿ0ದ ಬಂದವರು. ದಾನಿಗಳ ಆರ್ಥಿಕ ಸಹಾಯ ಸದುಪಯೋಗಪಡಿಸಿಕೊಂಡು ವಿವಿಧ ಕಾಲೇಜುಗಳಲ್ಲಿ ಓದಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ದಾನಿಗಳು, ಸಂಸ್ಥೆಯ ಸ್ವಯಂಸೇವಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net