ದಾನದಲ್ಲಿದೆ ಬದುಕಿನ ಸಾರ್ಥಕ್ಯ

12 SIRAGUPPA 01
Published on

ಸಿರಗುಪ್ಪ: ಸತ್ಯ ಶುದ್ಧವಾದ ಕಾಯಕ ಮಾಡುವ ಮೂಲಕ ಎಲ್ಲರೂ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು. ಇನ್ನೊಬ್ಬರ ಮನಸ್ಸು ಅರ್ಥೈಸಿಕೊಂಡು, ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು. ಕಾಯಕದಲ್ಲಿ ಮೇಲು-ಕೀಳು ಎಂಬುದಿಲ್ಲ ಎನ್ನುವುದನ್ನು ಅರಿಯಬೇಕು ಎಂದು ಬಸವ ಬಳಗದ ಶರಣ ಬಸವರಾಜಪ್ಪ ಹೇಳಿದರು.

ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬಸವ ಬಳಗ, ಅಕ್ಕನ ಬಳಗ ವತಿಯಿಂದ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಆಸ್ತಿ, ಅಂತಸ್ತು, ಹಣ, ಚಿನ್ನ, ಬೆಳ್ಳಿ ಇವು ನಿಜವಾದ ಸಂಪತ್ತು ಅಲ್ಲ. ಕುಡಿಯುವ ನೀರು, ಅನ್ನ ಹಾಗೂ ಉತ್ತಮ ವಿಚಾರಗಳು ನಿಜವಾದ ಸಂಪತ್ತು ಆಗಿವೆ. ಬಸವಾದಿ ಶಿವಶರಣರ ವಚನಗಳನ್ನು ಆಧರಿಸಿ ಒಳ್ಳೆಯ ವಿಚಾರಗಳ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರತಿಯೊಬ್ಬರೂ ಗಳಿಕೆಯಲ್ಲಿ ಸ್ವಲ್ಪ ಹಣವನ್ನು ಅಸಹಾಯಕರ ಜೀವನಕ್ಕಾಗಿ ದಾನ ಮಾಡುವ ಮೂಲಕ ಬದುಕಿನ ಸಾರ್ಥಕತೆಯನ್ನು ಪಡೆಯಬೇಕೆಂದು ಹೇಳಿದರು. ಶರಣ ನುಲಿಯ ಚಂದಯ್ಯ ಜಯಂತಿ ಆಚರಿಸಲಾಯಿತು. ನಾ.ಮ.ಜಗದೀಶ ಗವಾಯಿ ವಚನ ಸಂಗೀತ ಪ್ರಸ್ತುತ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net