ದಾನಗಳಲ್ಲಿ ರಕ್ತದಾನ ಶ್ರೇಷ್ಠ ಕಾರ್ಯ

CTD BJP--0000
Published on

ಚಿತ್ರದುರ್ಗ: ಎಲ್ಲ ದಾನಗಳಲ್ಲಿ ರಕ್ತದಾನ ಅತ್ಯಂತ ಶ್ರೇಷ್ಠವೆಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ 74 ನೇ ಜನ್ಮದಿನದ ಹಿನ್ನೆಲೆಯಲ್ಲಿ ಬಿಜೆಪಿ ನಗರ ಯುವ ಮೋರ್ಚಾ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಶನಿವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ರಕ್ತವನ್ನು ಕೃತಕವಾಗಿ ತಯಾರಿಸಲಾಗದು, ರಕ್ತಕ್ಕೆ ಪರ್ಯಾಯವಿಲ್ಲ ಎಂದರು.
ವಿವಿಧ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವ ಚಿತ್ರದುರ್ಗದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಗಾಯಾಳುಗಳ ತುರ್ತು ಚಿಕಿತ್ಸೆಗೆ ರಕ್ತದ ಅನಿವಾರ್ಯತೆ ಹೆಚ್ಚಿನದಾಗಿದೆ. ಜೀವಿತಾವಧಿ ರಕ್ತದಾನ ರೂಢಿಸಿಕೊಳ್ಳಬೇಕಿದೆ. ಮನೆಗಳಲ್ಲಿ ನಡೆಯುವ ಶುಭ ಕಾರ‌್ಯಗಳ ನೆನಪಿಗೆ ರಕ್ತದಾನದ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಅನ್ಯರ ಪ್ರಾಣವನ್ನು ಕಾಪಾಡಲು ನೆರವಾಗಲಿದೆ ಎಂದು ತಿಳಿಸಿದರು.
ಮೋದಿ ಅವರು ಪ್ರಧಾನಿ ಆದ ಬಳಿಕ ದೇಶ ಪ್ರಗತಿಯತ್ತ ಸಾಗಿದೆ. ಆರ್ಥಿಕ ಪರಿಸ್ಥಿತಿ ವೃದ್ಧಿಯಾಗಿದೆ. ಮುಂದಿನ 15 ವರ್ಷಗಳ ಕಾಲ ಮೋದಿ ಅವರೇ ಕೇಂದ್ರದ ಸಾರಥ್ಯ ವಹಿಸಲಿದ್ದಾರೆ ಎಂದರು.
ಮಾಜಿ ಶಾಸಕ ಜಿ. ಎಚ್.ತಿಪ್ಪಾರೆಡ್ಡಿ, ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ರಾಮು, ಸಂಪತ್‌ಕುಮಾರ್, ಸುರೇಶ್ ಸಿದ್ದಾಪುರ, ಮಲ್ಲಿಕಾರ್ಜುನ್, ಮಾಧುರಿ ಗಿರೀಶ್, ಚಂದ್ರಶೇಖರ್ ವಿಎಸ್ ಹಳ್ಳಿ, ಪ್ರದೀಪ್, ಅರುಣ್, ವರುಣ್, ಮಂಜುನಾಥ್, ಪವನ್‌ಕುಮಾರ್, ಅಭಿಲಾಷ್, ರಾಘು, ಮಂಜುನಾಥ್ ಆಚಾರ್, ಶಿವಣ್ಣಾಚಾರ್, ರಜನಿ, ಚಂದ್ರಿಕಾ ಲೋಕನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net