

ಮೂಡಲಗಿ: ಅಂತರಂಗ ಶುದ್ಧವಾಗಿಟ್ಟುಕೊಂಡು ಕಾಯಕ ಮಾಡಿ ಬಂದ ಸಂಪತ್ತಿನಲ್ಲಿ ದಾನ ಮಾಡಿ ಪುಣ್ಯ ಪಡೆಯಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲೂಕಿನ ಶಿವಾಪುರ ಗ್ರಾಮದ ಅಂಬಲಿ ಒಡೆಯ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಸವ ಬುತ್ತಿ ಮಹಾಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದರು. ಪವಾಡ ಪುರುಷ ಅಡವಿಸಿದ್ದೇಶ್ವರ ಅವರನ್ನು ಸ್ಮರಿಸಿದರೆ ಒಳಿತಾಗುತ್ತದೆ. ಎಲ್ಲರೂ ಒಂದಾಗಿ ಬಾಳಬೇಕು. ಗ್ರಾಮದ ತಾಯಂದಿರು ಬುತ್ತಿ ಕಟ್ಟಿಕೊಂಡು ಬಂದು ಭಕ್ತರಿಗೆ ಪ್ರಸಾದ ರೂಪದಲ್ಲಿ ಉಣಬಡಿಸಿದ್ದು ಹಳ್ಳಿ ಸಂಸತಿಯ ಪ್ರತಿಕ ಎಂದರು.
ಬಿಡಿಸಿಸಿ ನಿರ್ದೇಶಕ ಸತೀಶ ಕಡಾಡಿ ಮಾತನಾಡಿ, ಧರ್ಮ ಹಾಗೂ ಸಂಸತಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ಮಠ&ಮಂದಿರಗಳಿ ನಿರತವಾಗಿವೆ.
ಸಾತ್ವಿಕ ಗುಣಗಳು ಹೊಂದುವುದು ಮುಖ್ಯ ಎಂದರು.
ಮಠದ ಅಡವಿಸಿದ್ಧರಾಮ ಸ್ವಾಮೀಜಿ ಮಾತನಾಡಿ, ಎಲ್ಲರೂ ಒಂದಾಗಿ ಅಜ್ಜನ ಜಾತ್ರೆಯನ್ನು ಗ್ರಾಮಸ್ಥರು ಆಚರಿಸುತ್ತಿರುವುದು ಖುಷಿ ಸಂಗತಿ ಎಂದರು. ಟ್ರ್ಯಾಕ್ಟರ್ ಸ್ಪರ್ಧೆ ವಿಜೇತರಿಗೆ ಸತ್ಕರಿಸಲಾಯಿತು. ಪ್ರವಚನಕಾರ ಪಂಚಾರಿ ಶಾಸ್ತ್ರಿಗಳು, ಅಭಿನವ ಚನ್ನಬಸವ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಮಾರುತಿ ಶರಣರು, ಮುಖಂಡರಾದ ಎಸ್.ಜಿ. ಢವಳೇಶ್ವರ, ನಿಂಗಪ್ಪ ಫಿರೋಜಿ, ಕೆಂಪಣ್ಣ ಮುಧೋಳ, ಬಸವರಾಜ ಸಾಯನ್ನವರ, ಸತೀಶ ಜುಂಜರವಾರ, ಶಿವಬಸು ಜುಂಜರವಾಡ, ಭೀಮಗೌಡ ಪಾಟೀಲ, ಮಹಾಂತೇಶ ಕುಡಚಿ, ಲಕ್ಕಪ್ಪ ಕಬ್ಬೂರ, ಬಸಪ್ಪ ಶೀಳನ್ನವರ, ಈರಯ್ಯ ಹಿರೇಮಠ ಇತರರಿದ್ದರು.