ದಾನ ಮಾಡಿದರೆ ದೇವರಿಗೆ ಅಚ್ಚುಮೆಚ್ಚು

16 RON 1
Published on

ರೋಣ: ದುಡಿದು ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನು ದೀನರಿಗೆ ನೀಡಿದರೆ ದೇವರು ಮೆಚ್ಚುತ್ತಾನೆ. ಬಡ ಮಕ್ಕಳ ಬಾಳಿಗೆ ನೀವು ನೀಡುವ ಸಹಾಯ ದಾರಿದೀಪವಾಗುತ್ತದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಅಂಗಡಿ ಹೇಳಿದರು.

ದಿ. ವೀರಭದ್ರಪ್ಪ ಚಿತ್ರಗಾರ ಸ್ಮರಣಾರ್ಥ ಚಿತ್ರಗಾರ ಕುಟುಂಬದವರಿಂದ ಪಟ್ಟಣದ ವಿವಿಧ ಶಾಲೆಗಳ ಮಕ್ಕಳಿಗೆ ಬುಧವಾರ ಉಚಿತ ನೋಟ್​ಬುಕ್ ಹಾಗೂ ಪೆನ್ನು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಬಡವರು ಮತ್ತು ಶ್ರೀಮಂತರಲ್ಲಿ ಅಂತರ ಹೆಚ್ಚುತ್ತಲೇ ಇದೆ. ಗ್ರಾಮರಾಜ್ಯದ ಕನಸು ನನಸಾಗಿಲ್ಲ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಗಾಂಧೀಜಿ ಕಂಡ ಕನಸು ನನಸಾಗಿಲ್ಲ. ಶಿಕ್ಷಣದಿಂದ ಮಾತ್ರ ಅಸ್ಪೃಶ್ಯತೆ, ಜಾತೀಯತೆ, ಮೌಢ್ಯತೆ ಇತರೆ ಪಿಡುಗುಗಳನ್ನು ಹೋಗಲಾಡಿಸಲು ಸಾಧ್ಯ ಎಂದರು.

ಪಟ್ಟಣದ ಅಂಜುಮನ್ ಪ್ರೌಢ ಶಾಲೆ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳ ಬಡ ಮಕ್ಕಳಿಗೆ 500 ನೋಟ್​ಬುಕ್ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು. ಚಿತ್ರಗಾರ ಕುಟುಂಬದ ದೀಪಿಕಾ ಚಿತ್ರಗಾರ, ಕುಮಾರ ಚಿತ್ರಗಾರ, ಲೀಲಾ ಚಿತ್ರಗಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net