

ಕೊಡೇಕಲ್ : ನಾವು ಸಂಪಾದಿಸಿದ ಆಸ್ತಿ, ಅಂತಸ್ತು ಯಾವುದೂ ಶಾಶ್ವತವಲ್ಲ. ಹೀಗಾಗಿ ದಾನ-ಧರ್ಮದ ಮೂಲಕ ಸಮಾಜದ ಋಣ ತೀರಿಸಬೇಕು ಎಂದು ಅಗಡಿ ಅಕ್ಕಿ ಮಠದ ಶ್ರೀ ಡಾ.ಗುರುಲಿಂಗ ಸ್ವಾಮೀಜಿ ನುಡಿದರು.
ಶ್ರೀ ರಾಚೇಶ್ವರ ಶಿವಯೋಗಿಗಳ ೫೫೫ನೇ ಪುಣ್ಯಸ್ಮರಣೆ ನಿಮಿತ್ತ ಶುಕ್ರವಾರ ಸಂಜೆ ಗ್ರಾಮದಲ್ಲಿ ಏರ್ಪಡಿಸಿದ್ದ ಸಂಚಾರಿ ಶಿವಾನುಭವನ ಆಧ್ಯಾತ್ಮಿಕ ಪ್ರವಚನ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಅತ್ಯಂತ ಶ್ರೀಮಂತರಿದ್ದರೂ ಅನಾರೋಗ್ಯ ಸೇರಿ ಹಲವು ಸಮಸ್ಯೆಗಳು ಕಾಡುತ್ತಿರುತ್ತವೆ. ಅದೇ ಕೂಲಿ ಮಾಡುವವರು ನೆಮ್ಮದಿ ಜೀವನ ನಡೆಸುತ್ತಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಮನುಷ್ಯ ಹಣ ಗಳಿಕೆ ಹಿಂದೆ ಬಿದ್ದು ಮಾನವೀಯ ಗುಣಗಳನ್ನು ಮರೆಯುತ್ತಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದರು.
ಶಾಮಸುಂದರ ಜೋಶಿ ಮಾತನಾಡಿ, ಒಂದು ತಿಂಗಳಿAದ ವಲಯದ ವಿವಿಧ ಗ್ರಾಮಗಳಲ್ಲಿ ನಡೆದಿರುವ ಸಂಚಾರಿ ಆಧ್ಯಾತ್ಮಿಕ ಪವಚನದಿಂದ ಜನರ ಜೀವನ ಬದಲಾಗುತ್ತಿದೆ. ಇಂತಹ ಕರ‍್ಯಕ್ರಮಗಳಿಗೆ ಮಕ್ಕಳನ್ನು ಕರೆತರುವ ಮೂಲಕ ಉತ್ತಮ ಸಂಸ್ಕಾರ ನೀಡಬೇಕು ಎಂದು ಹೇಳಿದರು.
ಶ್ರೀ ನೀಲಕಂಠ ಸ್ವಾಮೀಜಿ, ಶ್ರೀ ನಾಗಭೂಷಣ ಸ್ವಾಮೀಜಿ, ಎಸ್.ಎಸ್.ಜೋಶಿ, ರಂಗನಾಥ ದೋರಿ, ಬಸಲಿಂಗಯ್ಯ ಮಠ, ಸೋಮಲಿಂಗಪ್ಪ ದೊರಿ, ವೀರಸಂಗಪ್ಪ, ಅಮರಪ್ಪ ಸಜ್ಜನ್, ಕನಕು ಜಿರಾಳ, ವಸಂತಗೌಡ ಮಾಲಿಗೌಡ್ರ, ರುದ್ರಪ್ಪ ಅಂಗಡಿ, ರವಿಂದ್ರ ಅಂಗಡಿ, ಮೋಹನ್ ಪಾಟೀಲ್, ಸಂಗಣ್ಣ ಮೇಲ್ದಾಪುರ, ಮಲ್ಲಣ್ಣ ಹೂಗಾರ, ವಿಜಯಕುಮಾರ ತುಮರಿಕೊಪ್ಪ, ಇತರರಿದ್ದರು. ಭಕ್ತರು ಶ್ರೀ ರಾಚೇಶ್ವರ ಶಿವಯೋಗಿಗಳ ಶಿಲಾ ಮೂರ್ತಿಯ ತುಲಾಭಾರ ನೆರವೇರಿಸಿದರು.