ದಾನ-ಧರ್ಮದಿAದ ಮುಕ್ತಿ ಸಾಧ್ಯ

ydg05
Published on

ಕೆಂಭಾವಿ: ದೇವಿ ಪುರಾಣ ದೇಹದ ಪುರಾಣ. ದೇಹದ ಪುರಾಣವೇ ದೇವಿಯ ಪುರಾಣ. ಮನುಷ್ಯನಲ್ಲಿರುವ ಅಜ್ಞಾನದ ಅವಗುಣ, ಅಹಂಕಾರ ಮತ್ತು ದುಷ್ಟ ದುರ್ಗುಣ ದೂರ ಮಾಡಿ ಮಾನವನನ್ನು ಸನ್ಮಾರ್ಗಕ್ಕೆ ಕರೆದುಕೊಂಡು ಹೋಗುವುದೇ ದೇವಿಯ ಪುರಾಣ ಎಂದು ಶ್ರೀ ಸಿದ್ದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.

ಮುದನೂರ ಗ್ರಾಮದ ಕೋರಿಸಿz್ದೆÃಶ್ವರ ಶಾಖಾ ಮಠದಲ್ಲಿ ದಸರಾ ಉತ್ಸವದ ಸಮಾರೋಪ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯ ಪ್ರೀತಿ, ವಾತ್ಸಲ್ಯ, ಪರರನ್ನು ಗೌರವಿಸಿ ಬದುಕಬೇಕಿದೆ. ದಾನ, ಧರ್ಮ, ಪರೋಪಕಾರ ಮಾಡಿದಾಗ ಪುಣ್ಯ ಪ್ರಾಪ್ತಿಯಾಗುತ್ತದೆ. ಗುರು ಕರುಣೆಯಿಂದ ನರ ಜನ್ಮಕ್ಕೆ ಮುಕ್ತಿ ಲಭಿಸಲು ಸಾಧ್ಯ ಎಂದರು.

ಮುತ್ತೆÊದೆಯರಿAದ ಕಾರ್ಯಕ್ರಮ ಉದ್ಘಾಟಿಸಲಾಯಿತು. ವೀರೇಶ ಕೆಂಭಾವಿ, ಯಮುನೇಶ ಹೆಗ್ಗನದೊಡ್ಡಿ ಸಂಗೀತ ಸೇವೆ ಸಲ್ಲಿಸಿದರು. ಸೂಗಯ್ಯ ಹಿರೇಮಠ ನಿರೂಪಣೆ ಮಾಡಿದರು. ನಂತರ ನೂರಾರು ಜನ ಮುತ್ತೆÊದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net