ದಾದಿಯರ ಸೇವೆ ಪವಿತ್ರ

nrp rotrey
ಎನ್.ಆರ್.ಪುರ ರೋಟರಿ ಕ್ಲಬ್‌ನಿಂದ ಸರ್ಕಾರಿ ಆಸ್ಪತ್ರೆ ದಾದಿ ಸ್ಟೆಲ್ಲಾ ಜೋಯಿ ಅವರನ್ನು ಸನ್ಮಾನಿಸಲಾಯಿತು. ಎಚ್.ಡಿ.ವಿನಯ್, ಜಿ.ಆರ್.ದಿವಾಕರ, ಪಿ.ಎಸ್.ವಿದ್ಯಾ, ಅಭಿಷೇಕ್, ಎಲ್.ಡಿ.ನವೀನ್, ಎಚ್.ಡಿ.ಧನಂಜಯ, ಎಂ.ಆರ್.ಸುಂದರೇಶ್ ಇದ್ದರು.
Published on

ಎನ್.ಆರ್.ಪುರ: ದಾದಿಯಯರ ಸೇವೆ ಪವಿತ್ರವಾದು ಎಂದು ರೋಟರಿ ಮಾಜಿ ಅಸಿಸ್ಟೆಂಟ್ ಗೌರ್ನರ್ ಎಚ್.ಡಿ.ವಿನಯ್ ಹೇಳಿದರು.

ದಾದಿಯರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ರೋಟರಿ ಕ್ಲಬ್‌ನ ವಾರದ ಸಭೆಯಲ್ಲಿ ಸರ್ಕಾರಿ ಆಸ್ಪತ್ರೆ ದಾದಿ ಸ್ಟೆಲ್ಲಾ ಜೋಯಿ ಅವರನ್ನು ಸನ್ಮಾನಿಸಿ ಮಾತನಾಡಿ, ಸ್ಟೆಲ್ಲಾ ಜೋಯಿ 39 ವಷರ್ಗಳ ಕಾಲ ರೋಗಿಗಳ ಸೇವೆ ಮಾಡಿದ್ದಾರೆ ಎಂದರು. ರೋಟರಿ ಕ್ಲಬ್ ಮಾಜಿ ಕಾರ್ಯದರ್ಶಿ ಪಿ.ಎಸ್.ವಿದ್ಯಾನಂದಕುಮಾರ್ ಮಾತನಾಡಿ, ದಾದಿ ಫ್ಲಾರೆನ್ಸ್ ನೈಟಿಂಗೇಲ್ ಅವರ ನೆನಪಿನಲ್ಲಿ ಪ್ರತಿ ವರ್ಷ ದಾದಿಯರ ದಿನ ಆಚರಿಸಲಾಗುತ್ತಿದೆ ಎಂದರು. ಸನ್ಮಾನ ಸ್ವೀಕರಿಸಿ ಸ್ಟೆಲ್ಲಾ ಜೋಯಿ ಮಾತನಾಡಿ, ನನ್ನ ಸೇವೆ ಗುರುತಿಸಿ ರೋಟರಿ ಕ್ಲಬ್ ಸನ್ಮಾನಿಸಿದೆ. ಇದರಿಂದ ಇನ್ನೂ ಹೆಚ್ಚಿನ ಸೇವೆ ಮಾಡಲು ಸ್ಫೂರ್ತಿ ಸಿಕ್ಕಿದೆ ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಜಿ.ಆರ್.ದಿವಾಕರ, ಮಧು ವೆಂಕಟೇಶ್, ಅಭಿಷೇಕ್, ಎಲ್.ಡಿ.ನವೀನ್, ಎಚ್.ಡಿ.ಧನಂಜಯ, ಎಂ.ಆರ್.ಸುಂದರೇಶ್, ಎನ್.ಟಿ.ಶೇಷಾಚಲ, ಇ.ಸಿ.ಜೋಯಿ, ಎಂ.ಒ.ಜೋಯಿ, ಮನೀಶ್, ಎಸ್.ಟಿ.ಗೌಡ, ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net