

ಬೆಟ್ಟದಪುರ: ಭಾರತದ ಬಡತನವನ್ನು ದಾಖಲೆಯ ವೇಗದಲ್ಲಿ ನರೇಂದ್ರ ಮೋದಿ ಸರ್ಕಾರ ನಿರ್ಮೂಲನೆ ಮಾಡುತ್ತಿದೆ ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ರಾಜೇಂದ್ರ ಹೇಳಿದರು.
ಬೆಟ್ಟದಪುರ ಗ್ರಾಮದಲ್ಲಿ ಭಾನುವಾರ ಕೇಂದ್ರ ಸರ್ಕಾರದಿಂದ ನೀಡುತ್ತಿರುವ ಭಾರತ್ ಬ್ರಾೃಂಡ್ ಅಕ್ಕಿ ವಿತರಣೆ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಹತ್ತು ವರ್ಷಗಳ ರಿಪೋರ್ಟ್ ಕಾರ್ಡ್ ಅನ್ನು ವಿತರಿಸಿ ಮಾತನಾಡಿದರು.
ಜನರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಅಕ್ಕಿಯನ್ನು ನೀಡುವ ಉದ್ದೇಶದಿಂದ ಜಾರಿಗೊಂಡಿರುವ ಈ ಯೋಜನೆಯು ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದರು.
ಬಿಜೆಪಿ ಸಂಚಾಲಕರಾದ ಎಂ.ಎಂ ರಾಜೇಗೌಡ, ಮೋಹನ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೈಲಾರಿ, ಕಾರ್ಯದರ್ಶಿ ಅರುಣ್ ರಾಜೇಅರಸ್, ಮುಖಂಡ ಸುಂದರ್, ಮಲ್ಲೇಶ್, ನಿತ್ಯಾನಂದ, ಪ್ರಶಾಂತ್, ಪಟೇಲ್ ನಟೇಶ್, ಮಹದೇವ್, ಲೋಕೋಪಾಲಯ್ಯ, ಶಿವಶಂಕರ್, ಅಶೋಕ್, ಕೆಂಡಗಣ್ಣಶೆಟ್ಟಿ, ಶಿವು ಇತರರು ಇದ್ದರು.