ದಾಖಲೆ ಪರಿಶೀಲಿಸಿ ಜಾತಿ ಪತ್ರ ವಿತರಣೆ ಮಾಡಲಿ

30Athni1
Published on

ಅಥಣಿ: ಬಣಜಿಗ ಸಮುದಾಯದ ಹೆಸರಿನಲ್ಲಿ ಬೇರೆ ಸಂಘದವರು ಹೆಸರು ನೋಂದಾಯಿಸಿ ಅನ್ಯ ಸಮುದಾಯದವರಿಗೆ ೨ಎ ಮತ್ತು ೩ಎ ಜಾತಿ ಪ್ರಮಾಣಪತ್ರ ಪಡೆಯಲು ಮುಂದಾಗಿರುವುದು ಕಂಡು ಬಂದಿದೆ. ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಗಿರೀಶ ಚುನಮರಿ ಹೇಳಿದರು.

ಪಟ್ಟಣದಲ್ಲಿ ರಾಜ್ಯ ಬಣಜಿಗ ಸಮುದಾಯದ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ್ ಸಿದರಾಯ ಭೋಸಗಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದರು. ಬಣಜಿಗ ಸಮುದಾಯ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ ಮಾತನಾಡಿ, ಪ್ರಮಾಣಪತ್ರ ವಿತರಿಸುವ ಮುನ್ನ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು.

ಸಂಘದ ತಾಲೂಕಾಧ್ಯಕ್ಷ ಸಂಗಪ್ಪ ಉಣ್ಣಿ ಮಾತನಾಡಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜು ಕೊಳಲಗಿ, ಸಂಘದ ಕಾರ್ಯದರ್ಶಿ ಮಹೇಶ ಚುನಮುರಿ, ಹಿರಿಯರಾದ ಶಂಕರ ಬುರ್ಲಿ, ಬಸವರಾಜ ಮಂಗಸೂಳಿ, ಸಿದ್ದಪ್ಪ ಮಹಾಜನ, ಶಿವಕುಮಾರ ಮೆನಸಿ, ಸಂಪತ್ತ ಸೊಳಸಿ, ಆರ್.ಎಸ್.ಧೂಪ, ಶಿವು ಬುರ್ಲಿ, ಮಹಾಂತೇಶ ಕಾರವೇಕಾರ, ಮಹಾಂತೇಶ ಉಕ್ಕಲಿ, ಸೋಮು ಶಿಲವಂತ, ಶೇಖರ ಕೋಲಾರ, ಅಶೋಕ ಕಾವೇರಿ, ಅಕ್ಷಯ ಬುರ್ಲಿ, ಆನಂದ ಪಾಂಗಿ, ಅಶೋಕ ಸಾವಡಕರ, ಪ್ರಕಾಶ ಮೆನಸಿ, ಪ್ರಕಾಶ ಕಾರವೇಕಾರ, ಪ್ರಶಾಂತ ಯಾದವಾಡ, ಗೌರೀಶ ಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net