ದಾಖಲಾತಿ ಆಂದೋಲನಕ್ಕೆ ಸಿಇಒ ಚಾಲನೆ

CEO School
Published on

ಚಿತ್ರದುರ್ಗ: ಶಾಲಾ ಆರಂಭೋತ್ಸವ ಹಾಗೂ ದಾಖಲಾತಿ ಆಂದೋಲನಕ್ಕೆ ನಗರದ ಹೊರವಲಯದ ಕವಾಡಿಗರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜಿಪಂ ಸಿಇಒ ಎಸ್.ಜಿ.ಸೋಮಶೇಖರ್, ಉಪ ಕಾರ್ಯದರ್ಶಿ ತಿಮ್ಮಪ್ಪ ಚಾಲನೆ ನೀಡಿದರು.

ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಿಸುವ, ಗುಲಾಬಿ ಹೂ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಇದೇ ವೇಳೆ 29 ವಿದ್ಯಾರ್ಥಿಗಳನ್ನು 1ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲಾಯಿತು ಎಂದು ಮುಖ್ಯ ಶಿಕ್ಷಕರು ಮಾಹಿತಿ ನೀಡಿದರು.

ಮೆರವಣಿಗೆ ಬಳಿಕ ಸ್ವಾಗತ: ವಿದ್ಯಾರ್ಥಿಗಳಿಗೆ ಟೋಪಿಗಳನ್ನು ಹಾಕಿ ಕವಾಡಿಗರಹಟ್ಟಿ ಜನವಸತಿ ಪ್ರದೇಶದಿಂದ ಮೆರವಣಿಗೆ ಮೂಲಕ ಶಾಲೆಯ ಬಳಿ ಕರೆದುಕೊಂಡು ಬರಲಾಯಿತು. ಸಿಹಿ ವಿತರಿಸಿ ಸ್ವಾಗತಿಸಲಾಯಿತು.

ಪ್ರಭಾರ ಡಿಡಿಪಿಐ ನಾಸಿರುದ್ದೀನ್, ಡಿವೈಪಿಸಿ ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್‌ಕುಮಾರ್, ಸಿಆರ್‌ಪಿ ಅಜಯ್‌ಕುಮಾರ್, ಬಿಐಇಆರ್‌ಟಿಗಳಾದ ರಾಜೀವ್, ರಾಜಣ್ಣ, ಎಸ್‌ಡಿಎಂಸಿ ಸದಸ್ಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net