ದಾಂಪತ್ಯ ಜೀವನಕ್ಕೆ ಆರು ಜೋಡಿ

09 ಸಿರಿಗೇರಿ 01 april photo
Published on

ಸಿರಿಗೇರಿ: ಶ್ರೀ ನಾಗನಾಥೇಶ್ವರ ಮತ್ತು ಸಿರಿಗೇರಮ್ಮ ರಥೋತ್ಸವ ಅಂಗವಾಗಿ ಗ್ರಾಮದ ಪಾಂಡುರಂಗ ದೇವಸ್ಥಾನದ ಸನ್ನಿಧಿಯಲ್ಲಿ ಬುಧವಾರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅರ್ಚಕ ಕೆ.ಎಂ.ವೀರೇಶಯ್ಯ ಶಾಸ್ತ್ರಿ ಪೌರೋಹಿತ್ಯದಲ್ಲಿ ಆರು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ನಂತರ ಅನ್ನದಾಸೋಹ ಕಾರ್ಯಕ್ರಮ ನಡೆಯಿತು.

ಪ್ರಮುಖರಾದ ಬಿ.ಸೋಮಶೇಖರಪ್ಪ, ಹೊಳಗುಂದಿ ದೇವಣ್ಣ, ಎಸ್.ಎಂ.ಅಡಿವೆಯ್ಯಸ್ವಾಮಿ, ಕರವೇ ಸ್ಥಳೀಯ ಘಟಕದ ಅಧ್ಯಕ್ಷ ನೆನಕ್ಕಿ ವಿರೂಪಾಕ್ಷಿ, ಪತ್ರಕರ್ತ ಶಿವರಾಜ, ಭೀಮ ಲಿಂಗಸ್ವಾಮಿ, ಕಲ್ಗುಡಿ ಪಂಪ, ಗುಡಟ್ಟಿ ಈರಣ್ಣ, ಚಲುವಾದಿ ಈರಣ್ಣ, ಚಲುವಾದಿ ತಿಮ್ಮಪ್ಪ, ಕೊಳ್ಳಿ ಪವಾಡಿ ನಾಯಕ, ದೇವರಾಜ, ಹಳ್ಳಿ ಮಾರೇಶ, ಹಳ್ಳಿ ನಾಗಮ್ಮ, ಪಾಂಡುರಂಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net