ದಾಂಡೇಲಿಯಲ್ಲಿ ಪೊಲೀಸರಿಂದ ಶೋಧನಾ ಕಾರ್ಯ

6 DND 1
Published on

ದಾಂಡೇಲಿ: ಮೈಕ್ರೊ ಫೈನಾನ್ಸ್ ಕಿರುಕುಳಕ್ಕೆ ಜನ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಬಡವರು ಮನೆ ತೊರೆಯುತ್ತಿದ್ದಾರೆ. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ದಾಂಡೇಲಿಯ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ಬುಧವಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶೋಧನಾ ಕಾರ್ಯಚರಣೆ ನಡೆಸಲಾಯಿತು.

ದಾಳಿಯಲ್ಲಿ ಗಾಂಧಿನಗರದ ಕಿಶನ್ ಸುಭಾಸ ಕಂಜರಬಾಟ ಮನೆಯಲ್ಲಿ ಶೋಧನಾ ಕಾರ್ಯ ನಡೆಸಲಾಯಿತು. ಈ ವೇಳೆ ಎರಡು ಖಾಲಿ ಇ ಸ್ಟ್ಯಾಂಪ್ ಪೇಪರ್​ಗಳು ಸಿಕ್ಕಿವೆ. ಕಿಶನ್ ಅಕ್ರಮ ಮೀಟರ್ ಬಡ್ಡಿ ವ್ಯವಹಾರವನ್ನೇ ತನ್ನ ಉದ್ಯೋಗ ಮಾಡಿಕೊಂಡಿರುವುದಾಗಿ ಮತ್ತು ಲೈಸೆನ್ಸ್ ಇಲ್ಲದೆ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ.

ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಡ ಜನರಿಗೆ ಹಣ ನೀಡಿ ಹೆಚ್ಚಿನ ಬಡ್ಡಿ ಆಕರಿಸುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಮಾರುತಿನಗರದ ವಿಜಯ ಸಾಯಿನಾಥ ಪೆರುಮಾಲಕ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅದೇ ರೀತಿ ಆಶ್ರಯ ನಗರ ಕಾಲನಿಯ ಮೌಲಾ ಕಲಾಲ ರಿಕ್ಷಾವಾಲಾ ವಿರುದ್ಧ ಭದ್ರತಾ ಕಾಯ್ದೆಯಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಗರದಲ್ಲಿ ಯಾವುದೇ ರೀತಿಯ ಮೈಕ್ರೋ ಫೈನಾನ್ಸ್ ಕಿರುಕುಳ ಕಂಡು ಬಂದಲ್ಲಿ ನಗರ ಠಾಣೆಯಲ್ಲಿ ದೂರು ಸಲ್ಲಿಸಬೇಕು ಎಂದು ನಗರ ಪೊಲೀಸ್ ಠಾಣಾ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net